ನನ್ನ ಪತ್ನಿಗೆ ಮಂತ್ರಿಯೊಂದಿಗೆ ಅಫೇರ್ ಇತ್ತು, ಅದಕ್ಕೆ ಕೊಂದೆ: ಶಾಕಿಂಗ್ ಹೇಳಿಕೆ ನೀಡಿದ ಸಂಜಯ್ ದತ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಕರಣ್ ಜೋಹರ್ ನಿರೂಪಣೆಯ ‘ಕಾಫಿ ವಿತ್ ಕರಣ್’ (Koffee With Karan) ಶೋನಲ್ಲಿ ಶಾಕಿಂಗ್ ಹೇಳಿಕೆಯೊಂದನ್ನು ಬಿಚ್ಚಿಟ್ಟಿದ್ದಾರೆ.

ಅದೇನೆಂದರೆ ನನ್ನ ಪತ್ನಿಗೆ ಮಂತ್ರಿಯೊಂದಿಗೆ ಅಫೇರ್ ಇತ್ತು, ಅದಕ್ಕೆ ಆಕೆಯನ್ನು ಕೊಂದೆ ಎಂದು ಹೇಳಿಕೊಂಡಿದ್ದಾರೆ.

ಕರಣ್ ಜೊತೆ ಮಾತಾಡುವಾಗ ಸಂಜಯ್ ದತ್ ಕೆಲವು ವೈಯಕ್ತಿಕ ವಿಷಯಗಳನ್ನು ಹಂಚಿಕೊಂಡಿದ್ದರು. ಸಂಜಯ್ ಶೋನಲ್ಲಿ ನನ್ನ ಪತ್ನಿ ಮಂತ್ರಿಯೊಂದಿಗೆ ಅಫೇರ್ ಇಟ್ಟುಕೊಂಡಿದ್ದಳು. ಅವಳನ್ನು ಕೊಂದು ಬಿಟ್ಟೆ. ಅದೇ ಕರ್ಮ ಇಂದು ನನ್ನನ್ನು ಕಾಡುತ್ತಿದೆ ಎಂದು ಹೇಳಿದರು. ಆದರೆ ಅದು ಈ ಜನ್ಮದಲ್ಲಿ ಅಲ್ಲ. ತಮ್ಮ ಕಳೆದ ಜನುಮದಲ್ಲಿ ನಡೆದ ವಿಷಯ ಎಂದು ಹೇಳಿದ್ದಾರೆ.
ಅಶೋಕ ಸಾಮ್ರಾಜ್ಯವಿದ್ದ ಕಾಲದಲ್ಲಿ ನಾನು ರಾಜನಾಗಿದ್ದೆ. ನನ್ನ ಮಂತ್ರಿಯೊಂದಿಗೆ ನನ್ನ ಪತ್ನಿ ಅಫೇರ್ ಇಟ್ಟುಕೊಂಡಿದ್ದಳು. ನಾನು ಸಾಯಲಿ ಅಂತಾನೇ ಯುದ್ದಕ್ಕೆ ಕಳುಹಿಸಿದ್ದಳು. ಆದರೆ, ನಾನು ಸಾಕಷ್ಟು ಯೋಧರನ್ನು ಯುದ್ಧದಲ್ಲಿ ಸಾಯಿಸಿದೆ. ಯುದ್ದದ ನಂತರ ಇಬ್ಬರ ಮದ್ಯೆ ಇದ್ದ ಅಫೇರ್ ಬಗ್ಗೆ ಗೊತ್ತಾಗಿ, ನಾನು ನನ್ನ ಪತ್ನಿ ಹಾಗೂ ಮಂತ್ರಿ ಸಾಯಿಸಿ ಬಿಟ್ಟೆ ಎಂದು ಸಂಜಯ್ ದತ್ ಹೇಳಿದ್ದಾರೆ.

ಕಳೆದ ಜನ್ಮದಲ್ಲಿ ಮಾಡಿದ್ದ ತಪ್ಪಿಗೆ ಈ ಜನ್ಮದಲ್ಲಿ ಅದರ ಕರ್ಮವನ್ನು ಅನುಭವಿಸಬೇಕಾಗಿದೆ. ಹಿಂದಿನ ಜನ್ಮದಿಂದಲೇ ನಾನು ಒಳ್ಳೆಯ ಕುಟುಂಬದಲ್ಲಿ ಹುಟ್ಟಿದೆ. ಹಾಗಾಗಿಯೇ ನಾನು ಈಗ ಬದುಕಿದ್ದೇನೆ. ಆ ಕಾರಣಕ್ಕೆ ನಾನು ಈ ವೃತ್ತಿಯಲ್ಲಿದ್ದೇನೆ ಎಂದು ಸಂಜಯ್ ಹೇಳಿದ್ದರು. ಅಲ್ಲದೆ, ತಾಯಿ ನರ್ಗೀಸ್ ದತ್, ಮೊದಲ ಪತ್ನಿ ರಿಚಾ ಶರ್ಮಾ ಕಳೆದುಕೊಂಡಿದ್ದು, ಜೈಲುವಾಸ ಇದೆಲ್ಲವೂ ಹೋದ ಜನ್ಮದ ಕರ್ಮದ ಫಲ ಎಂದು ದತ್ ಹೇಳಿಕೊಂಡಿದ್ದಾರೆ.

ಸಂಜಯ್ ದತ್ (Sanjay Dutt)ಮೂರು ಮದುವೆ ಆಗಿದ್ದಾರೆ. ಮೊದಲು ರೀಚಾ ಶರ್ಮಾ ಅವರನ್ನು 1987ರಲ್ಲಿ ಮದುವೆಯಾದರು. ರೀಚಾ ಮದುವೆಯ ಎರಡು ವರ್ಷಗಳ ಬಳಿಕ ಬ್ರೇನ್ ಟ್ಯೂಮರ್‌ನಿಂದ ಮರಣ ಹೊಂದಿದರು. ನಂತರ 1998ರಲ್ಲಿ ರಿಯಾ ಪಿಳ್ಳಯ್ ಅವರನ್ನು ಮದುವೆಯಾದರು. ಆದರೆ ಕಾರಣಾಂತರಗಳಿಂದ 2008ರಲ್ಲಿ ಇಬ್ಬರು ವಿಚ್ಛೇದನ ಪಡೆದುಕೊಂಡರು. ಮತ್ತೆ ಸಂಜಯ್ 2008ರಲ್ಲಿ ಮಾನ್ಯತಾ ಅವರನ್ನು ವಿವಾಹವಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!