ಭಾರತದಿಂದ ಕೆನಡಾ ರಾಜತಾಂತ್ರಿಕ ಅಧಿಕಾರಿಗಳ ಸ್ಥಳಾಂತರ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಹಳಸಿದ್ದು, ಹೀಗಾಗಿ ಕೆನಡಾ (Canada) ತನ್ನ ರಾಜತಾಂತ್ರಿಕ ಸಿಬ್ಬಂದಿಯನ್ನು ಕಡಿಮೆ ಮಾಡಲು ಅಕ್ಟೋಬರ್ 10 ರ ಗಡುವನ್ನು ನೀಡಿದ ನಂತರ ದೆಹಲಿ ಹೊರಗೆ ಭಾರತದಲ್ಲಿ ಕೆಲಸ ಮಾಡುತ್ತಿರುವ ತನ್ನ ರಾಜತಾಂತ್ರಿಕರಲ್ಲಿ ಹೆಚ್ಚಿನವರನ್ನು ಕೌಲಾಲಂಪುರ್ (Kuala Lumpur) ಅಥವಾ ಸಿಂಗಾಪುರಕ್ಕೆ(Singapore) ಸ್ಥಳಾಂತರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ರಾಜತಾಂತ್ರಿಕರನ್ನು ವಾಪಸ್‌ ಕರೆ‌ಸಿಕೊಳ್ಳಲು ಭಾರತ ನೀಡಿದ್ದ ಗಡುವು ಸಮೀಪ ಆಗ್ತಿರುವ ಕಾರಣ. ತನ್ನ ಬಹುತೇಕ ರಾಜತಾಂತ್ರಿಕರನ್ನ ಸಿಂಗಪುರ ಅಥವಾ ಮಲೇಷ್ಯಾಗೆ ಕೆನಡಾ ಸ್ಥಳಾಂತರಿಸಿದೆ ಎನ್ನಲಾಗಿದೆ. ಇನ್ನು ಈ ನಡುವೆ ರಾಷ್ಟ್ರ ರಾಜಧಾನಿ ದೆಹಲಿ ಬಿಟ್ಟು, ಭಾರತದ ಇತರ ಪ್ರಮುಖ ನಗರದಲ್ಲಿ ಕಾರ್ಯ ನಿರ್ವಹಿಸುವ ರಾಜತಾಂತ್ರಿಕರ ಪೈಕಿ ಬಹುತೇಕರನ್ನು ಈಗಾಗಲೇ ಶಿಫ್ಟ್ ಮಾಡಿದೆ ಕೆನಡಾ ಆಡಳಿತ. ಈ ಎಲ್ಲಾ ಬೆಳವಣಿಗೆ ಬಗ್ಗೆ ಕೆನಡಾದ ಮಾಧ್ಯಮಗಳು ವರದಿ ಮಾಡಿವೆ.

ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ(Justin Trudeau) ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆಗೆ ಭಾರತೀಯ ಏಜೆಂಟ್‌ಗಳ ಸಂಬಂಧವಿದೆ ಎಂಬ ಆರೋಪದ ನಂತರ ಭುಗಿಲೆದ್ದ ರಾಜತಾಂತ್ರಿಕ ಗದ್ದಲದ ನಡುವೆ, ಈ ವಾರದ ಆರಂಭದಲ್ಲಿ ಕೆನಡಾ ತನ್ನ ಕಾರ್ಯಾಚರಣೆಗಳಿಂದ ಹಲವಾರು ಡಜನ್ ರಾಜತಾಂತ್ರಿಕರನ್ನು ಹಿಂತೆಗೆದುಕೊಳ್ಳುವಂತೆ ಭಾರತವು ಕೆನಡಾವನ್ನು ಕೇಳಿಕೊಂಡ ನಂತರ ಆ ಬೆಳವಣಿಗೆ ನಡೆದಿದೆ .

ಕೆನಡಾದಲ್ಲಿರುವ ಭಾರತೀಯ ರಾಜತಾಂತ್ರಿಕರ ಸಂಖ್ಯೆಗೆ ಸಮನಾದ ಮಟ್ಟಕ್ಕೆ ಕೆನಡಾದ ರಾಜತಾಂತ್ರಿಕ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳಲು ಭಾರತ ಸರ್ಕಾರವು ಕೆನಡಾಗೆ ಅಕ್ಟೋಬರ್ 10 ರವರೆಗೆ ಕಾಲಾವಕಾಶ ನೀಡಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!