ಮ್ಯಾನ್ಮಾರ್ʼನ ಪದಚ್ಯುತ ನಾಯಕಿ ಆಂಗ್ ಸಾನ್ ಸೂಕಿಗೆ ಮತ್ತೆ ಆರು ವರ್ಷಗಳ ಜೈಲು ಶಿಕ್ಷೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮ್ಯಾನ್ಮಾರ್ʼನ ಪದಚ್ಯುತ ನಾಯಕಿ ಆಂಗ್ ಸಾನ್ ಸೂಕಿ ಅವರಿಗೆ ಮತ್ತೆ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಮೂಲಕ 77 ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರ ಬೆಂಬಲಿಗರನ್ನು ಮತ್ತಷ್ಟು ಕೆರಳಿಸುವ ತೀರ್ಪು ನೀಡಿದೆ.

ದಿವಂಗತ ತಾಯಿಯ ಹೆಸರಿನಲ್ಲಿರುವ ಚಾರಿಟಿಗೆ ಸಂಬಂಧಿಸಿದ ನಾಲ್ಕು ಭ್ರಷ್ಟಾಚಾರ ಆರೋಪಗಳಲ್ಲಿ ಸಾನ್ ಸೂಕಿ ತಪ್ಪಿತಸ್ಥರೆಂದು ರಾಜಧಾನಿ ನೈಪಿಡಾವ್‌ನ ಜೈಲಿನ ಕಾಂಪೌಂಡ್‌ನಲ್ಲಿರುವ ವಿಶೇಷ ನ್ಯಾಯಾಲಯವು ತೀರ್ಪು ನೀಡಿದೆ.

2021ರ ಕ್ಷಿಪ್ರಕ್ರಾಂತಿಯಲ್ಲಿ ಸೈನ್ಯವು ಅಧಿಕಾರವನ್ನ ವಶಪಡಿಸಿಕೊಂಡ ನಂತ್ರ ಮತ್ತವರ ಒಟ್ಟು ಜೈಲು ಶಿಕ್ಷೆಯನ್ನ 17 ವರ್ಷಗಳಿಗೆ ತಂದ ಮೇಲೆ ಇದು ಸೂಕಿ ವಿರುದ್ಧ ನಾಲ್ಕನೇ ಸುತ್ತಿನ ಕ್ರಿಮಿನಲ್ ತೀರ್ಪುಗಳಾಗಿವೆ, ಇದು ಜುಂಟಾ ಅಧಿಕಾರದಲ್ಲಿದ್ದಾಗ ರಾಜಕೀಯ ಪುನರಾಗಮನ ಮಾಡುವ ಯಾವುದೇ ಅವಕಾಶವನ್ನ ತೆಗೆದುಹಾಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!