ಕೃಷಿಯಲ್ಲಿನ ತೊಡಕುಗಳಿಗೆ ಪರಿಹಾರ ನೀಡಬಲ್ಲುದು ತಂತ್ರಜ್ಞಾನಾಧಾರಿತ ಸ್ಮಾರ್ಟ್‌ ಕೃಷಿ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ತಂತ್ರಜ್ಞಾನವು ಅಳವಡಿಕೆಯಾಗದ ಜಾಗವೇ ಇಲ್ಲ. ಕೃಷಿ ಕ್ಷೇತ್ರವೂ ಇದಕ್ಕೆ ಹೊರತಲ್ಲ. ವಿನೂತನ ತಂತ್ರಜ್ಞಾನ ಕ್ರಮಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ಭಾರತವು ಈಗ ಸ್ಮಾರ್ಟ್‌ ಕೃಷಿಯಂತಹ ನಾಳೆಯ ವ್ಯವಸ್ಥೆಗಳಿಗೆ

ತನ್ನನ್ನು ತಾನು ತೆರೆದುಕೊಳ್ಳುತ್ತಿದೆ. ಇದರಿಂದಾಗಿ ಕೃಷಿಯಲ್ಲಿ ಗಮನಾರ್ಹ ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದ್ದು ಮುಂಬರುವ ದಿನಗಳಲ್ಲಿ ಸ್ಮಾರ್ಟ್‌ ಕೃಷಿ ಹೊಸದೊಂದು ಕ್ರಾಂತಿಯನ್ನೇ ಸೃಷ್ಟಿಸಿದರೂ ಆಶ್ಚರ್ಯವೇನಿಲ್ಲ.

ಏನಿದು ಸ್ಮಾರ್ಟ್‌ ಕೃಷಿ ?
ಇದು ಸೆನ್ಸರ್‌ ಗಳ ಅಳವಡಿಕೆ ಮತ್ತು ಸ್ವಯಂಚಾಲಿತ ನೀರಾವರಿ ಪದ್ಧತಿಯನ್ನೊಳಗೊಂಡ ಆಧುನಿಕ ಕೃಷಿ ವಿಧಾನವಾಗಿದ್ದು ಇದು ಕೃಷಿ ಭೂಮಿ, ತಾಪಮಾನ ಮತ್ತು ಮಣ್ಣಿನ ತೇವಾಂಶವನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ರೈತರು ಎಲ್ಲಿಂದಲಾದರೂ ಬೆಳೆಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.
ಇದಲ್ಲದೆ, ಸ್ಮಾರ್ಟ್ ಕೃಷಿಯು ಡಿಜಿಟಲ್ ಮತ್ತು ಭೌತಿಕ ಮೂಲಸೌಕರ್ಯಗಳನ್ನು ಸಂಯೋಜಿಸಲು ಸಹಾಯ ಮಾಡುತ್ತದೆ, ಇದು ಸಣ್ಣ ರೈತರಿಗೆ ಪ್ರಯೋಜನವನ್ನು ನೀಡುತ್ತದೆ.

ಈ ದೃಷ್ಟಿಯಿಂದ ಭಾರತ ಸರ್ಕಾರವೂ ಕಾರ್ಯನಿರತವಾಗಿದ್ದು ಈ ವ್ಯವಸ್ಥೆಗೆ ಪೂರಕವಾಗುವಂತೆ ಡಿಜಿಟಲ್ ಅಗ್ರಿಕಲ್ಚರ್ ಮಿಷನ್ (DAM) ಅನ್ನು ಅನುಷ್ಠಾನಗೊಳಿಸುತ್ತಿದೆ, ಇದರಲ್ಲಿ ಇಂಡಿಯಾ ಡಿಜಿಟಲ್ ಎಕೋಸಿಸ್ಟಮ್ ಆಫ್ ಅಗ್ರಿಕಲ್ಚರ್ (IDEA), ರೈತರ ಡೇಟಾಬೇಸ್, ಏಕೀಕೃತ ರೈತರ ಸೇವಾ ಇಂಟರ್ಫೇಸ್ (UFSI), ಹೊಸ ತಂತ್ರಜ್ಞಾನದ ಮೇಲೆ ರಾಜ್ಯಗಳಿಗೆ ಹಣ NeGPA), ಮಹಲನೋಬಿಸ್ ರಾಷ್ಟ್ರೀಯ ಬೆಳೆ ಮುನ್ಸೂಚನೆ ಕೇಂದ್ರ (MNCFC), ಮಣ್ಣಿನ ಆರೋಗ್ಯ, ಫಲವತ್ತತೆ ಮತ್ತು ಪ್ರೊಫೈಲ್ ಮ್ಯಾಪಿಂಗ್ ಅನ್ನು ನವೀಕರಿಸುವುದು ಮುಂತಾದ ವ್ಯವಸ್ಥೆಗಳನ್ನು ಹೊಂದಿದೆ.

ಈ ಕುರಿತಾಗಿ ಸಂಶೋಧನೆಗಳೂ ನಡೆಯುತ್ತಿದ್ದು ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸುವ ನಿಟ್ಟಿನಲ್ಲಿ ಸುಮಾರು 450ಕ್ಕೂ ಹೆಚ್ಚು ಸ್ಟಾರ್ಟಪ್‌ ಗಳು ಕಾರ್ಯ ನಿರ್ವಹಿಸುತ್ತಿವೆ.

NeGPA ಕಾರ್ಯಕ್ರಮದ ಅಡಿಯಲ್ಲಿ ವಿವಿಧ ಭಾರತೀಯ ರಾಜ್ಯಗಳಲ್ಲಿನ ಸರ್ಕಾರಗಳಿಗೆ ಡಿಜಿಟಲ್ ಕೃಷಿ ಯೋಜನೆಗಳಿಗೆ ಸಂಬಂಧಿಸಿದಂತೆ ಅನುದಾನ ನೀಡಲಾಗುತ್ತಿದ್ದು
ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ (AI/ML), ಇಂಟರ್ನೆಟ್ ಆಫ್ ಥಿಂಗ್ಸ್ (IOT), ಬ್ಲಾಕ್ ಚೈನ್ ಇತ್ಯಾದಿಗಳನ್ನು ಬಳಸಿಕೊಂಡು ಡಿಜಿಟಲ್ ಕೃಷಿ ಯೋಜನೆಗಳಿಗೆ ಹಣವನ್ನು ನೀಡಲಾಗುತ್ತದೆ. ಡ್ರೋನ್ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಸ್ಮಾರ್ಟ್ ಕೃಷಿಯನ್ನು ಉತ್ತೇಜಿಸಲು, ಸರ್ಕಾರವು ಕೃಷಿ ವಲಯದಲ್ಲಿ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸುತ್ತಿದೆ. ಆ ಮೂಲಕ ದೇಶದಲ್ಲಿ ನವಯುಗದ ಸ್ಮಾರ್ಟ್‌ ಕೃಷಿಯ ಕುರಿತಾಗಿ ಪ್ರೋತ್ಸಾಹ ನೀಡಲಾಗುತ್ತಿದೆ. ತನ್ಮೂಲಕ ಕೃಷಿಯಲ್ಲಿನ ಸಮಸ್ಯೆಗಳನ್ನು, ತೊಡಕುಗಳನ್ನು ನಿವಾರಿಸಲು ಸರ್ಕಾರ ಚಿಂತಿಸುತ್ತಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!