ಯುವಕನ ಅಂಗಾoಗ ದಾನದಿಂದ 5 ಜನರ ಜೀವಕ್ಕೆ ಬೆಳಕು

ಹೊಸದಿಗಂತ ವರದಿ,ಮೈಸೂರು:

ಯುವಕನೊಬ್ಬ ತಾನು ಸತ್ತ ಮೇಲೂ ತನ್ನ ಅಂಗಾoಗ ದಾನದ ಮೂಲಕ 5 ಜನರು ಬಾಳಿಗೆ ಬೆಳಕಾಗಿದ್ದಾನೆ.
ಮೃತ ದರ್ಶನ್ ( 24) ಎಂಬ ಯುವಕನ ಅಂಗಾoಗಗಳನ್ನು 5 ಮಂದಿ ರೋಗಿಗಳಿಗೆ ಜೋಡಿಸುವ ಮೂಲಕ ಅವರ ಜೀವ ಉಳಿಸಲಾಗಿದೆ.
ಬಹಳ ಗಂಭೀರ ಸ್ಥಿತಿಯಲ್ಲಿ ಮೈಸೂರಿನ ಗೋಪಾಲಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದರ್ಶನ್‌ನನ್ನು ಅಪೋಲೋ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. ಎರಡು ದಿನಗಳ ಕಾಲ ಲೈಫ್ ಸಪೋರ್ಟ್ನಲ್ಲಿ ಇರಿಸಲಾಗಿತ್ತು. ಆದರೆ ಆತನ ಮೆದುಳು ಡೆಡ್ ಆದ ಕಾರಣ ಆತ ಬದುಕುಳಿಯಲಿಲ್ಲ. ಆತನ ಅಂಗಾoಗಗಳು ದಾನಕ್ಕೆ ಅರ್ಹವೆಂದು ದರ್ಶನ್ ಪೋಷಕರಿಗೆ ಮನವರಿಕೆ ಮಾಡಿಕೊಟ್ಟಾಗ, ಅವರು ಅದಕ್ಕೆ ಒಪ್ಪಿಗೆ ನೀಡಿದರು. ಹಾಗಾಗಿ ದರ್ಶನ್‌ನ ಹೃದಯ, ಒಂದು ಕಿಡ್ನಿ, ಲೀವರ್, ಕಾರ್ನಿಯಾಗಳನ್ನು ತೆಗೆದು ಅದನ್ನು ವಿವಿಧ ಆಸ್ಪತ್ರೆಗಳಲ್ಲಿ ಅಗತ್ಯವಿದ್ದ ರೋಗಿಗಳಿಗೆ ಜೋಡಣೆ ಮಾಡಲೆಂದು ಸಾಗಾಣಿಕೆ ಮಾಡಲಾಯಿತು. ಇದರಲ್ಲಿ ಜೀವಂತ ಹೃದಯವನ್ನು ಮೈಸೂರಿನ ಮಂಡಕಳ್ಳಿ ವಿಮಾನನಿಲ್ದಾಣದಿಂದ ಚೆನ್ನೈನ ಎಂಜಿಎ ಹೆಲ್ತ್ ಕೇರ್ ಆಸ್ಪತ್ರೆಗೆ ವಿಮಾನದ ಮೂಲಕ ಸಾಗಿಸಲಾಗಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!