ಹೊಸದಿಗಂತ ವರದಿ,ಹುಬ್ಬಳ್ಳಿ:
ಪಂಜಾಬ್ ರಾಜ್ಯದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹೋಗಿದ್ದ ಪ್ರಧಾನಿ ಮೋದಿಯವರಿಗೆ ಹಲವಾರು ಅಡೆತಡೆಗಳಾದವು. ಮುಂದೆ ಈ ರೀತಿಯಾಗಬಾರದು ಎಂದು ಅವರ
ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿ ಹು-ಧಾ ೭೩ ಸೆಂಟ್ರಲ್ ಮಹಿಳಾ ಮೋರ್ಚಾದ ವತಿಯಿಂದ ಮೃತ್ಯುಂಜಯ ಹೋಮ-ಹವನ ನಡೆಸಲಾಯಿತು.
ಇಲ್ಲಿಯ ಜಯನಗರದ ಈಶ್ವರ ದೇವಸ್ಥಾನದಲ್ಲಿ ಶುಕ್ರವಾರ ಮಹಾ ಮೃತ್ಯುಂಜಯ ಹೋಮ ಹಾಗೂ ಜಪ ಕಾರ್ಯಕ್ರಮ ಆಯೋಜನೆ ಮಾಡಿದ್ದ ಮಹಿಳಾ ಮೋರ್ಚಾ ಪದಾಕಾರಿಗಳು ಮತ್ತು ಮಹಾನಗರ ಪಾಲಿಕೆ ಸದಸ್ಯರು
ಪ್ರಧಾನಿ ಮೋದಿ ಅವರಿಗೆ ಯಾವುದೇ ತೊಂದರೆಗಳು ಆಗದಿರಲಿ, ಅವರು ದೀರ್ಘಾಯುಷಿ ಯಾಗಿ ಬಾಳಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್ ಪ್ರವಾಸದ ವೇಳೆ ಭದ್ರತಾ ಲೋಪವುಂಟಾಗಿ, ಕೆಲಗಂಟೆಗಳ ಕಾಲ ಟ್ರಾಫಿಕ್ ನಲ್ಲಿ ಸಿಲುಕಿದರು. ಇದಕ್ಕಾಗಿ ಪ್ರಧಾನಿ ಮೋದಿಯವರಿಗೆ ಯಾವುದೇ ವಿಘ್ನಗಳು ಬಾರದಿರಲಿ ಎಂದು ಬಿಜೆಪಿ ಹೋಮ ಹವನ ನೆರವೇರಿಸಲಾಯಿತು.
ರಾಜ್ಯ ಬಿಜೆಪಿ ಕಾರ್ಯದರ್ಶಿ ಮೇನಕಾ ಹುರಳಿ ಮಾತನಾಡಿ, ದೇಶದ ಅಭಿವೃದ್ಧಿಗೆ ಹಗಲಿರುಳು ದುಡಿಯುತ್ತಿರುವ ಪ್ರಧಾನಿ ಮೋದಿಯವರಿಗೆ ಶತ್ರುಗಳು ಜಾಸ್ತಿಯಾಗುತ್ತಿದ್ದಾರೆ. ಆದರಿಂದ ಎಲ್ಲವನ್ನು ಸೂಕ್ತವಾಗಿ ಅವರು ಎದುರಿಸಲು ಮತ್ತು ಆರೋಗ್ಯ ಆಯಸ್ಸು ಹೆಚ್ಚಾಗಲಿ ಎಂದು ಮೃತುಂಜ್ಯಯ ಹೋಮ ಮಾಡಿಸಲಾಗಿದೆ ಎಂದರು.
ಸಾಬೂನು ನಿಗಮ ಮಂಡಳಿ ನಿರ್ದೇಶಕ ಮಲ್ಲಿಕಾರ್ಜುನ ಸಾವಕಾರ, ಸೆಂಟ್ರಲ್ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ವಿರುಪಾಕ್ಷ ರಾಯನಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀಮಾ ಲದ್ವಾ, ಉಮಾ ಮುಕುಂದ, ರೂಪಾ ಶೆಟ್ಟಿ, ಅಕ್ಕಮ್ಮ ಹೆಗಡೆ, ಭಾರತಿ ಟಪಾಲ್, ಉಮಾ ಅಕ್ಕೋರೆ ಇದ್ದರು.