ಮೈಸೂರು ದಸರಾ ‘ಗಜಪಯಣ’ ಆರಂಭ, ಅರಮನೆಯತ್ತ ಒಂಬತ್ತು ಆನೆಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ವಿಶ್ವವಿಖ್ಯಾತ ಮೈಸೂರು ದಸರಾದ ವಿಶೇಷ ಆಕರ್ಷಣೆಯಾದ ಆನೆಗಳನ್ನು ಸ್ವಾಗತಿಸುವ ಗಜಪಯಣಕ್ಕೆ ಬುಧವಾರ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಚಾಲನೆ ನೀಡಲಾಗಿದ್ದು, ಒಂಬತ್ತು ಆನೆಗಳು ಅರಮನೆ ನಗರಿಯತ್ತ ಹೆಜ್ಜೆ ಹಾಕಿದವು.

ಮೈಸೂರು ದಸರಾಕ್ಕೆ ಆಗಮಿಸುವ ಅಭಿಮನ್ಯು ನೇತೃತ್ವದ ಗಜ ಪಡೆಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಭರ್ಜರಿ ಸ್ವಾಗತವನ್ನು ನೀಡಲಾಯಿತು.

ಪ್ರತಿ ವರ್ಷ ಗಜಪಯಣದಲ್ಲಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕುಮ್ಕಿ ಆನೆಗಳು ದಸರಾ ಉತ್ಸವದಲ್ಲಿ ಜಂಬೂ ಸವಾರಿ ಮೆರವಣಿಗೆಗೆ ತರಬೇತಿಗಾಗಿ ಮೈಸೂರಿಗೆ ಹೋಗುತ್ತವೆ.

ಈ ವರ್ಷ ಮೊದಲ ಬ್ಯಾಚ್‌ನಲ್ಲಿ ಒಂಬತ್ತು ಆನೆಗಳು, ಅಭಿಮನ್ಯು, ಧನಂಜಯ, ಗೋಪಿ, ಭೀಮಾ, ರೋಹಿತ್, ಕಂಜನ್, ಹೊಸ ಆನೆ ಏಕಲವ್ಯ ಹಾಗೂ ಹೆಣ್ಣು ಆನೆಗಳಾದ ವರಲಕ್ಷ್ಮಿ ಮತ್ತು ಲಕ್ಷ್ಮಿಯನ್ನು ಇಂದು ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಬಳಿ ಅರಣ್ಯ ಇಲಾಖೆ ಹಾಗೂ ದಸರಾ ಸಮಿತಿಯಿಂದ ಬರ ಮಾಡಿಕೊಳ್ಳಲಾಯಿತು.ದಸರಾ ಕಾರ್ಯಾಧ್ಯಕ್ಷ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್ ಸಿ ಮಹದೇವಪ್ಪ ಅವರು ಆನೆಗಳಿಗೆ ಪೂಜೆ ಸಲ್ಲಿಸುವುದರೊಂದಿಗೆ ಗಜಪಯಣಕ್ಕೆ ಚಾಲನೆ ನೀಡಿದ್ದಾರೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!