Sunday, December 10, 2023

Latest Posts

ಗಜಪಡೆ, ಅಶ್ವಪಡೆಗೆ ಕೊನೆ ಹಂತದ ಸಿಡಿಮದ್ದಿನ ತಾಲೀಮು ಪೂರ್ಣ

ಹೊಸದಿಗಂತ ವರದಿ, ಮೈಸೂರು :

ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಕೊನೆ ದಿನ ನಡೆಯುವ ಐತಿಹಾಸಿಕ ಜಂಬೂಸವಾರಿ ಮೆರವಣಿಗೆಗೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಯನ್ನು ಸಕಲ ರೀತಿಯಲ್ಲಿ ಸಜ್ಜುಗೊಳಿಸಲಾಗುತ್ತಿದೆ. ಈಗಾಗಲೇ ಗಜಪಡೆಗೆ ಭಾರ ಹೊರುವ, ಮರದ ಅಂಬಾರಿಯನ್ನು ಹೊತ್ತು ಸಾಗುವ ತಾಲೀಮು ಯಶಸ್ವಿಯಾಗಿ ನಡೆಸಲಾಗಿದೆ.

ಎರಡು ಬಾರಿ ಫಿರಂಗಿಗಳಿoದ ಸಿಡಿಯುವ ಢಂ, ಢಂ ಎಂದು ಕಿವಿಗಿಚ್ಚಿಡುವಂತೆ. ಎದೆ ನಡುಗಿಸುವಂತೆ ಭಾರೀ ಶಬ್ದವನ್ನುಂಟು ಮಾಡುವ ಸಿಡಿಮದ್ದಿನ ತಾಲೀಮು ನಡೆಸಲಾಗಿತ್ತು. ಕೊನೆ ಹಂತದ ತಾಲೀಮನ್ನು ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಮಂಗಳವಾರ ನಡೆಸಲಾಯಿತು. ನಗರ ಸಶಸ್ತç ಮೀಸಲು ಪಡೆಯ ಸಿಬ್ಬಂದಿ 7 ಫಿರಂಗಿ ಗಾಡಿಗಳಿಂದ ಒಟ್ಟು 21 ಬಾರಿ ಕುಶಾಲತೋಪು ಸಿಡಿಸಲಾಯ್ತು. 7 ಪಿರಂಗಿಗಳ ಮೂಲಕ ಮೂರು ಸುತ್ತಿನ ತಾಲೀಮು ಮಾಡಲಾಗಿಯಿತು ತಾಲೀಮಿನಲ್ಲಿ 37 ಕುದುರೆಗಳು, ಜಂಬೂ ಸವಾರಿಯ ನೇತೃತ್ವ ವಹಿಸಿರುವ ಅಭಿಮನ್ಯು, ತಂಡದ ಸದಸ್ಯರಾದ ವರಲಕ್ಷಿ÷್ಮ, ವಿಜಯ, ಧನಂಜಯ, ಮಹೇಂದ್ರ, ಗೋಪಿ, ಭೀಮ, ಕಂಜನ್, ಅರ್ಜುನ, ಲಕ್ಷಿ÷್ಮ ಮೊದಲಾದವು ಪಾಲ್ಗೊಂಡಿದ್ದವು. ಈ ವೇಳೆ ಸಹಜವಾಗಿ ಗೋಪಿ, ಪ್ರಶಾಂತ, ಸುಗ್ರೀವ ಆನೆಗಳು ಬೆದರಿ ನಿಂತಲ್ಲೇ ಸುತ್ತು ಹಾಕಿದವಾದರೂ. ಮಾವುತರು, ಕಾವಾಡಿಗಳು ಅವುಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.

ಉಳಿದಂತೆ ಹಿರಣ್ಯ, ರೋಹಿತ ಆನೆಗಳು ಅಂತಿಮ ತಾಲೀಮಿನಿಂದಲೂ ದೂರ ಉಳಿದಿದ್ದವು.
ಡಿಸಿಎಫ್ ಸೌರಬ್ ಮಾತನಾಡಿ, ಎಂದಿನoತೆ ತಾಲೀಮು ಯಶಸ್ವಿಯಾಗಿದೆ. ಜಂಬೂ ಸವಾರಿಗೆ ಗಜಪಡೆ ಸನ್ನದ್ದವಾಗಿದೆ ಎಂದರು. ಈ ವೇಳೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರಪೊಲೀಸ್ ಆಯುಕ್ತ ರಮೇಶ್ ಬಾನೋತ್ ಸೇರಿ ಅ ಉಪಸ್ಥಿತರಿದ್ದರು.

ದಸರಾ ಆನೆಗಳನ್ನು ನೋಡಲು ಜನವೋ ಜನ
ಅರಮನೆ ನಗರಿ ಮೈಸೂರಿನಲ್ಲಿ ಬೀಡು ಬಿಟ್ಟಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಆನೆಗಳನ್ನು ನೋಡಲು ಜನ ಸಾಗರವೇ ಹರಿದು ಬರುತ್ತಿದೆ. ಅರಮನೆಯ ಆವರಣದಲ್ಲಿರುವ ಶಿಬಿರಕ್ಕೆ ಜನರು ಬರುತ್ತಿದ್ದು, ಆನೆಗಳ ಮುಂದೆ ನಿಂತು ಮೊಬೈಲ್‌ನಿಂದ ಪೋಟೋ ತೆಗೆಯಿಸಿಕೊಳ್ಳುವ, ಸೆಲ್ಫಿ ತೆಗೆದುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಗಜಪಡೆ ದಿನದ ಎರಡು ಹೊತ್ತುಗಳಲ್ಲಿ ನಡೆಸುವ ಅರಮನೆಯಿಂದ ಬನ್ನಿಮಂಟಪದವರೆಗಿನ ತಾಲೀಮಿನ ವೇಳೆ ರಸ್ತೆಯ ಇಕ್ಕಲೆಗಳಲ್ಲಿ ನಿಂತು, ಸಮೀಪದಲ್ಲಿಯೇ ಸಾಲು, ಸಾಲಾಗಿ ಹೋಗುವ ಆನೆಗಳನ್ನು ನೋಡಿ ಕಣ್ತುಂಬಿಕೊoಡು, ಮೊಬೈಲ್‌ನಲ್ಲಿ ಅವುಗಳ ದೃಶ್ಯಗಳನ್ನು ಸೆರೆ ಹಿಡಿದುಕೊಂಡು, ಹತ್ತಿರದಿಂದ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ. ಇನ್ನೂ ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಗಜಪಡೆಗೆ ಅಂತಿಮ ಹಂತದ ಸಿಡಿಮದ್ದಿನ ತಾಲೀಮು ನಡೆಸುವ ವಿಷಯ ತಿಳಿದಿದ್ದ ನೂರಾರು ಜನರು ಸ್ಥಳದಲ್ಲಿ ಜಮಾಯಿಸಿ, ತಾಲೀಮು ವೀಕ್ಷಿಸಿದರು. ಆನೆಗಳನ್ನು ನೋಡಿ ಖುಷಿ ವ್ಯಕ್ತಪಡಿಸಿದರು. ಹರಿದು ಬರುತ್ತಿದ್ದ ಜನರನ್ನು ನಿಯಂತ್ರಿಸಲು ಸ್ಥಳದಲ್ಲಿದ್ದ ಪೊಲೀಸರು ಹರ ಸಾಹಸ ನಡೆಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!