ಹೊಸ ದಿಗಂತ ವರದಿ, ಮೈಸೂರು:
ಜಿಲ್ಲೆಯಲ್ಲಿ ಹುಲಿಗಳ ಅಟ್ಟಹಾಸ ಮುಂದುವರಿದಿದ್ದು, ಇದೀಗ ಹುಲಿಯೊಂದರ ದಾಳಿಗೆ ರೈತನೊಬ್ಬ ಬಲಿಯಾಗಿರುವ ಘಟನೆ ಜಿಲ್ಲೆಯ ಸರಗೂರು ತಾಲೂಕಿನ ಕಾಡಬೇಗೂರು ಗ್ರಾಮದಲ್ಲಿ ಸೋಮವಾರ ನಡೆದಿದೆ.
ಗ್ರಾಮದ ನಿವಾಸಿಯಾದ ಬಾಲಾಜಿ ನಾಯಕ್ ಹುಲಿಗೆ ಬಲಿಯಾದ ರೈತ. ಇವರು ತಮ್ಮ ಜಮೀನಿನಲ್ಲಿ ಸುಂಟಿ ಬೆಳೆಯ ಕೆಲಸವನ್ನು ಮಾಡುತ್ತಿದ್ದಾಗ, ಅಲ್ಲಿಗೆ ಬಂದಿದ್ದ ಹುಲಿ ಹಠಾತ್ತನೆ ದಾಳಿ ನಡೆಸಿ, ಕೊಂದು ಹಾಕಿ, ದೇಹವನ್ನು ಅರ್ಧ ತಿಂದಿದೆ. ಬಾಲಾಜಿ ನಾಯಕ್ ಕಿರುಚಾಟ ಕೇಳಿ ಸ್ಥಳಕ್ಕೆ ರೈತರು ಧಾವಿಸಿದಾಗ ಹುಲಿ ಅಲ್ಲಿಂದ ಹೊರಟು ಹೋಗಿದೆ.
ವಿಷಯ ತಿಳಿದು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.