ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಂಬೂಸವಾರಿ ಮೆರವಣಿಗೆಗೂ ಮುನ್ನ ಅರಮನೆಯ ಬಲರಾಮ ಗೇಟ್ ಮುಂಭಾಗನಾಡದೊರೆ ಸಿದ್ದರಾಮಯ್ಯ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು. ಮಧ್ಯಾಹ್ನ 1.40ಕ್ಕೆ ಸರಿಯಾಗಿ ಪೂಜೆ ನೆರವೇರಿಸಿದ ಸಿದ್ದರಾಮಯ್ಯ, ಬಳಿಕ ತೆರೆದ ವಾಹನದಲ್ಲಿ ಅರಮನೆಯತ್ತ ಮೆರವಣಿಗೆ ಮೂಲಕ ಬಂದರು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಾಥ್ ನೀಡಿದರು.
ನಂದಿ ಧ್ವಜ ಮೆರವಣಿಗೆ ಸಾಗುತ್ತಿದ್ದು, ಇದರ ಜೊತೆಗೆ ಸ್ತಬ್ದಚಿತ್ರ, ಕಲಾತಂಡಗಳೂ ಭಾಗಿಯಾಗಿವೆ. ಪ್ರತಿವರ್ಷದಂತೆ ಈ ವರ್ಷವೂ ಕೂಡ ಉಡಿಗಾಲು ಮಹದೇವಪ್ಪ ಅವರ ಕುಟುಂಬಸ್ಥರು ನಂದಿ ಧ್ವಜವನ್ನು ಹೊತ್ತಿದ್ದಾರೆ.
ಈ ನಂದಿ ಧ್ವಜಸ್ಥಂಭ 33 ಅಡಿ ಎತ್ತರ 150 ಕೆಜಿ ತೂಕವಿದ್ದು, ನಂದಿ ವಿಗ್ರಹ, ಹರಡೆ ಚತ್ತು, ಪಂಚಕಳಶವನ್ನು ಒಳಗೊಂಡಿದೆ. ಸುಮಾರು 20 ಕಲಾವಿದರಿಂದ ಕರಡಿ ಮೇಳದ ಜೊತೆ ನಂದಿಧ್ವಜ ಸ್ತಂಭ ಕುಣಿತ ನಡೆಯುತ್ತದೆ.