ಹೊಸ ದಿಗಂತ ವರದಿ, ಮೈಸೂರು:
ಆನೆ ತರಬೇತಿ ಶಿಬಿರದಲ್ಲಿದ್ದ ಕಾಡಾನೆಯೊಂದು ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಸರಗೂರು ಸಮೀಪದ ರಾಮಾಪುರ ಆನೆ ಶಿಬಿರದಲ್ಲಿ ನಡೆದಿದೆ.
ಕರ್ಣ (36) ಎಂಬ ಹೆಸರಿನ ಗಂಡು ಸಾವನ್ನಪ್ಪಿದೆ. ಈ ಆನೆಯನ್ನು 2021ರಲ್ಲಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ಸೆರೆ ಹಿಡಿಯಲಾಗಿತ್ತು.
ಅದಕ್ಕೆ ತರಬೇತಿಯನ್ನು ಶಿಬಿರದಲ್ಲಿ ನೀಡಲಾಗುತ್ತಿತ್ತು. ಆರೋಗ್ಯವಾಗಿದ್ದ ಈ ಆನೆ ಅಸ್ವಸ್ಥಗೊಂಡು ಕುಸಿದುಬಿದ್ದು ಮೃತಪಟ್ಟಿದೆ ಎಂದು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಪರಮೇಶ್ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಹೇಳಿದರು.