ಸರ್ಕಾರಕ್ಕೆ ಲಾಭಾಂಶ ಸಲ್ಲಿಸಿದ ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಕಂಪನಿ

ಹೊಸದಿಗಂತ ವರದಿ, ಮೈಸೂರು
ಅರಮನೆ ನಗರಿ ಮೈಸೂರಿನ ಪ್ರತಿಷ್ಠಿತ ಮೈಸೂರು ಪೇಯಿಂಟ್ಸ್ ಮತ್ತು ವಾರ್ನಿಷ್ ಲಿ. ಸಂಸ್ಥೆಯು 2020-21 ನೇ ಸಾಲಿನಲ್ಲಿ ರೂ 39.75 ಕೋಟಿಗಳಷ್ಟು ವಹಿವಾಟು ನಡೆಸಿ ರೂ 6.75 ಕೋಟಿ (ತೆರಿಗೆ ಮುಂಚಿನ) ಲಾಭ ಗಳಿಸಿದೆ.
ಸಂಸ್ಥೆಯು ಎಲ್ಲಾ ಶೇರುದಾರರಿಗೆ ಶೇ. 25 ಡಿವಿಡೆಂಡ್ ಘೋಷಿಸಿದ್ದು, ಅದರನ್ವಯ ಕರ್ನಾಟಕ ಸರ್ಕಾರಕ್ಕೆ ಡಿವಿಡೆಂಡ್ ಮೊತ್ತ 23,68,250 ರೂಗಳ ಚೆಕ್ಕನ್ನು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವರಿಗೆ,ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಸಣ್ಣ ಕೈಗಾರಿಕಾ ಸಚಿವ ಎಮ್ ಟಿ ಬಿ ನಾಗರಾಜ್ ಸಮ್ಮುಖದಲ್ಲಿ ಕಂಪನಿಯ ಅಧ್ಯಕ್ಷ ಎನ್.ವಿ.ಫಣೀಶ್ ನೀಡಿದರು.
ಮುಖ್ಯ ಕಾರ್ಯದರ್ಶಿ ರವಿಕುಮಾರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ರಮಣರೆಡ್ಡಿ, ವಂದಿತಾ ಶರ್ಮ ಹಾಗೂ ಸಂಸ್ಥೆಯ ನಿರ್ದೇಶಕ ಭರತ್ ಕುಮಾರ್, ವ್ಯವಸ್ಥಾಪಕ ನಿರ್ದೇಶಕ(ಪ್ರ) ಹರಕುಮಾರ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!