ಜಿಂಕೆ‌ ಬೇಟೆಯಾಡುತ್ತಿದ್ದವರ ಮೇಲೆ ಅರಣ್ಯಾಧಿಕಾರಿಗಳ ದಾಳಿ: ಇಬ್ಬರು ಸೆರೆ, ನಾಲ್ವರು ಪರಾರಿ

ಹೊಸದಿಗಂತ ವರದಿ, ಮಡಿಕೇರಿ
ಮೀಸಲು ಅರಣ್ಯ ವ್ಯಾಪ್ತಿಯ ಜೇನುಕಲ್ಲು ಬೆಟ್ಟದಲ್ಲಿ ಜಿಂಕೆ ಬೇಟೆಯಾಡುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಬಂಧಿಸಿದ್ದು, ನಾಲ್ವರು ಸ್ಥಳದಿಂದ ಪರಾರಿಯಾಗಿದ್ದಾರೆ.
ಯಲಕನೂರು ಹೊಸಳ್ಳಿ ಗ್ರಾಮದ ಕಾವೇರಪ್ಪ, ಹರೀಶ, ಪ್ರವೀಣ್, ಕೃಷ್ಣಪ್ಪ, ಪ್ರೇಮ್‍ನಾಥ್ ಹಾಗೂ ಮೋನಿಶ್ ಅವರುಗಳು ಬುಧವಾರ ರಾತ್ರಿ ಜೇನುಕಲ್ಲು ಬೆಟ್ಟದಲ್ಲಿ ಜಿಂಕೆ ಭೇಟೆಯಾಡಿದ್ದು, ಗುರುವಾರ ಬೆಳಗ್ಗೆ ಮಾಂಸವನ್ನು ಸಾಗಿಸುತ್ತಿದ್ದರು. ಈ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸಿದ ಅರಣ್ಯಾಧಿಕಾರಿಗಳು ಕಾವೇರಪ್ಪ ಹಾಗೂ ಹರೀಶ್’ನನ್ನು ಬಂಧಿಸಿದ್ದು, ಉಳಿದವರು ಪರಾರಿಯಾಗಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಆಟೋ, ಮೂರು ಬಂದೂಕು ಮತ್ತು ಜಿಂಕೆ ಮಾಂಸ ವಶಪಡಿಸಿಕೊಳ್ಳಲಾಗಿದೆ.
ಸೋಮವಾರಪೇಟೆ ಎಸಿಎಫ್ ಸಿ.ಡಿ. ನೆಹರು, ಆರ್‍ಎಫ್‍ಒ ಶಮಾ ಅವರುಗಳ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಫಾರೆಸ್ಟರ್ ಭರತ್, ಮನು, ಗಾರ್ಡ್‍ಗಳಾದ ರಾಜಣ್ಣ, ಭೀಮಣ್ಣ, ಲೋಕೇಶ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!