August 26, 2026
Wednesday, August 26, 2026
spot_img

‘ಸಂಗೀತ ಸರಸ್ವತಿ’ಗೆ ಮೈಸೂರಿನಲ್ಲಿ ಗೌರವ ನಮನ: ನಾಳೆ ಅಂತಿಮ ವಿದಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಭಾರತದ ಹೆಸರಾಂತ ಗಾಯಕಿ ಎಸ್. ಜಾನಕಿ ಅವರ ನಿಧನದ ಬಳಿಕ ಅಂತ್ಯಸಂಸ್ಕಾರದ ಕುರಿತು ಜಿಲ್ಲಾಡಳಿತ ಅಧಿಕೃತ ಮಾಹಿತಿ ನೀಡಿದೆ.

ಕುಟುಂಬದ ಒಪ್ಪಿಗೆ ಹಾಗೂ ಗಾಯಕಿಯ ಕೊನೆಯ ಇಚ್ಛೆಯನ್ನು ಗೌರವಿಸಿ, ಮೈಸೂರಿನಲ್ಲೇ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ.

ತಮ್ಮ ಅಂತ್ಯಸಂಸ್ಕಾರ ಮೈಸೂರಿನಲ್ಲೇ ನಡೆಯಬೇಕೆಂಬ ಎಸ್. ಜಾನಕಿ ಅವರ ಆಶಯವನ್ನು ಗೌರವಿಸಿ, ಕುಟುಂಬದ ಸಮ್ಮತಿಯೊಂದಿಗೆ ಅಲ್ಲಿಯೇ ಅಂತ್ಯಕ್ರಿಯೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಸರ್ಕಾರದಿಂದ ಪೂರ್ಣ ಗೌರವದೊಂದಿಗೆ ವಿಧಿವಿಧಾನಗಳು ನಡೆಯಲಿವೆ.

ಸಾರ್ವಜನಿಕರಿಗೆ ಅಂತಿಮ ದರ್ಶನ

ಭಾನುವಾರ ಬೆಳಗ್ಗೆ 8 ಗಂಟೆಯಿಂದ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕರು ಹಾಗೂ ಅಭಿಮಾನಿಗಳಿಗೆ ಪಾರ್ಥಿವ ಶರೀರದ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ:

ಫಾರ್ಮ್‌ಹೌಸ್‌ನಲ್ಲಿ ಅಂತ್ಯಸಂಸ್ಕಾರ

ಸಾರ್ವಜನಿಕ ದರ್ಶನದ ಬಳಿಕ ಎಚ್.ಡಿ. ಕೋಟೆ ತಾಲೂಕಿನ ಬೋಗಾದಿ ಸಮೀಪದ ನವೀನ್ ಅವರ ಫಾರ್ಮ್‌ಹೌಸ್‌ನಲ್ಲಿ ಸಂಜೆ ಅಂತ್ಯಸಂಸ್ಕಾರ ನೆರವೇರಲಿದೆ. ಪೊಲೀಸ್ ಗೌರವದೊಂದಿಗೆ ಅಂತಿಮ ವಿಧಿವಿಧಾನಗಳು ನಡೆಯಲಿವೆ.

ಮೊಮ್ಮಗಳಿಂದ ಅಂತಿಮ ವಿಧಿ

ಎಸ್. ಜಾನಕಿ ಅವರ ಪುತ್ರ ಈಗಾಗಲೇ ನಿಧನರಾಗಿರುವ ಕಾರಣ, ಮೊಮ್ಮಗಳು ಅಪ್ಸಾರ ಅವರು ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ. ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !