July 13, 2026
Monday, July 13, 2026
spot_img

ಭಾರತದಲ್ಲಿ ಕಟ್, ವಿದೇಶದಲ್ಲಿ ಅನ್‌ಕಟ್: ದಳಪತಿ ‘ಜನ ನಾಯಗನ್’ ಚಿತ್ರಕ್ಕೆ ಸೆನ್ಸಾರ್ ಕತ್ತರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳು ಚಿತ್ರರಂಗದ ಖ್ಯಾತ ನಟ ಹಾಗೂ ರಾಜಕಾರಣಿ ದಳಪತಿ ವಿಜಯ್ ಅವರ ಬಹುನಿರೀಕ್ಷಿತ ಹಾಗೂ ಕೊನೆಯ ಸಿನಿಮಾ ‘ಜನ ನಾಯಗನ್’ ಕೊನೆಗೂ ಬಿಡುಗಡೆಗೆ ಸಜ್ಜಾಗಿದೆ. ಸುಮಾರು ಏಳು ತಿಂಗಳ ಸುದೀರ್ಘ ವಿಳಂಬದ ನಂತರ ಥಿಯೇಟರ್‌ಗೆ ಬರುತ್ತಿರುವ ಈ ಆಕ್ಷನ್ ಚಿತ್ರಕ್ಕೆ ಭಾರತೀಯ ಸೆನ್ಸಾರ್ ಮಂಡಳಿಯು ಹಲವು ದೃಶ್ಯಗಳನ್ನು ಕತ್ತರಿಸಿ ‘ಎ’ ಪ್ರಮಾಣಪತ್ರ ನೀಡಿದೆ.

ಭಾರತದಲ್ಲಿ ಕಟ್, ವಿದೇಶದಲ್ಲಿ ಅನ್‌ಕಟ್ ಧಮಾಕಾ!

ಭಾರತದಲ್ಲಿ ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ ಭಾರೀ ಕತ್ತರಿ ಪ್ರಯೋಗ ಮಾಡಿದ್ದರೆ, ವಿದೇಶಗಳಲ್ಲಿ ಮಾತ್ರ ಯಾವುದೇ ಬದಲಾವಣೆ ಇಲ್ಲದೆ ಒರಿಜಿನಲ್ ‘ರಾ ಮತ್ತು ಅನ್‌ಕಟ್’ ವರ್ಷನ್ ಬಿಡುಗಡೆಯಾಗುತ್ತಿದೆ. ಯುಕೆಯಲ್ಲಿ ಜುಲೈ 24 ರಂದು ‘ಅಹಿಂಸಾ ಎಂಟರ್‌ಟೈನ್‌ಮೆಂಟ್’ ಸಂಸ್ಥೆಯ ಮೂಲಕ 15+ ರೇಟಿಂಗ್‌ನೊಂದಿಗೆ ಯಾವುದೇ ದೃಶ್ಯ ಅಥವಾ ಡೈಲಾಗ್ ಕಟ್ ಇಲ್ಲದೆ ವಿಜಯ್ ಅವರ ಮಾಸ್ ಆಕ್ಷನ್ ಸಿನಿಮಾ ರಿಲೀಸ್ ಆಗಲಿದೆ ಎಂದು ವಿತರಕರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಖಚಿತಪಡಿಸಿದ್ದಾರೆ.

ವಿಜಯ್ ರಾಜಕೀಯ ಪಕ್ಷ ‘TVK’ ಲಿಂಕ್ ಡೈಲಾಗ್ಸ್ ಮ್ಯೂಟ್

ಈ ಚಿತ್ರದಲ್ಲಿ ವಿಜಯ್ ಪಾತ್ರದ ಹೆಸರು ‘ದಳಪತಿ ವೆಟ್ರಿ ಕೊಂಡಾನ್’ ಎಂದಾಗಿದ್ದು, ಇದರ ಮೊದಲ ಅಕ್ಷರಗಳು ಅವರ ರಾಜಕೀಯ ಪಕ್ಷ ‘ತಮಿಳಗ ವೆಟ್ರಿ ಕಳಗಂ’ (TVK) ಹೆಸರನ್ನು ಹೋಲುತ್ತವೆ. ಚಿತ್ರದಲ್ಲಿದ್ದ ‘ಅಂಬೇಡ್ಕರ್ ಸಟಮ್ ಟು TVK ಸಟಮ್’ ಎಂಬ ವಿವಾದಾತ್ಮಕ ಡೈಲಾಗ್ ಸೇರಿದಂತೆ, ‘ಓಂ’, ‘ನ್ಯೂ ಇಂಡಿಯಾ’, ‘ಭಾಗವತಂ’ ಮತ್ತು ‘ರಂಗನಾಥರ್’ ಎಂಬ ಪದಗಳನ್ನು ಮ್ಯೂಟ್ ಮಾಡಲಾಗಿದೆ. ಸದ್ದಾಂ ಹುಸೇನ್ ಗಲ್ಲು ಶಿಕ್ಷೆಯ ಡೈಲಾಗ್, ರಾಷ್ಟ್ರಧ್ವಜ ನೆಲಕ್ಕೆ ಬೀಳುವ ಸೀನ್ ಹಾಗೂ ಮಗುವನ್ನು ಸುಡುವ ಹಿಂಸಾತ್ಮಕ ದೃಶ್ಯಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !