ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಟಿ ಸಿಟಿ ಬೆಂಗಳೂರಿನ ಕನಕಪುರ ರಸ್ತೆಯ ಕಗ್ಗಲಿಪುರದಲ್ಲಿರುವ 830 ಅಪಾರ್ಟ್‌ಮೆಂಟ್‌ಗಳ ವಸತಿ ಸಮುಚ್ಚಯದಲ್ಲಿ ಕಳೆದ ಐದು ದಿನಗಳಿಂದ ಅನೇಕ ನಿವಾಸಿಗಳು ನಿಗೂಢ ಕಾಯಿಲೆಯಿಂದ ಬಳಲುತ್ತಿದ್ದಾರೆ. ಬ್ರಿಗೇಡ್ ಮೆಡೋಸ್ ಪ್ಲುಮೆರಿಯಾ ಅಪಾರ್ಟ್ ಮೆಂಟಿನ ಚಿಕ್ಕ ಮಕ್ಕಳು ಮತ್ತು ಹಿರಿಯ ನಾಗರಿಕರು ಕಾಯಿಲೆಯಿಂದ ಬಳಲುತ್ತಿದ್ದಾರೆ.
262 ಕುಟುಂಬಗಳನ್ನು ಒಳಗೊಂಡ ಕನಿಷ್ಠ 500 ನಿವಾಸಿಗಳು ವಾಂತಿ, ಜ್ವರ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ. ಅಪಾರ್ಟ್‌ಮೆಂಟ್ ಸಂಕೀರ್ಣದೊಳಗೆ ಸ್ವಂತ ಬೋರ್ ಇದೆ, ಅದರ ನೀರನ್ನು ನಿವಾಸಿಗಳು ಬಳಕೆ ಮಾಡುತ್ತಿದ್ದಾರೆ.