September 26, 2026
Saturday, September 26, 2026
spot_img

ಮುಧೋಳದಲ್ಲಿ ನಿಗೂಢ ಭೂ ಕುಸಿತ: ಕಾರಣ ತಿಳಿಯದೆ ಕಂಗಾಲಾದ ರೈತರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ನಿಂಗಾಪುರ ಗ್ರಾಮದಲ್ಲಿ ದಿಢೀರ್ ಭೂ ಕುಸಿತ ಸಂಭವಿಸಿದ್ದು, ಸ್ಥಳೀಯ ಗ್ರಾಮಸ್ಥರಲ್ಲಿ ತೀವ್ರ ಆತಂಕ ಹಾಗೂ ಭಯದ ವಾತಾವರಣ ನಿರ್ಮಾಣವಾಗಿದೆ.

ಗ್ರಾಮದ ರೈತರೊಬ್ಬರ ಕಬ್ಬಿನ ಗದ್ದೆಯಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ ಭೂಮಿ ಕುಸಿದಿದೆ. ಸುಮಾರು 20 ಅಡಿ ಆಳ ಹಾಗೂ 10 ಅಡಿ ಅಗಲದಷ್ಟು ಭೂಮಿ ಬಾಯಿ ತೆರೆದಿದ್ದು, ಈ ನಿಗೂಢ ದೃಶ್ಯವನ್ನು ಕಂಡು ತೋಟದ ಮಾಲೀಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಸದ್ಯಕ್ಕೆ ಈ ಭಾಗದಲ್ಲಿ ಕೃಷಿ ಚಟುವಟಿಕೆ ನಡೆಸಲು ರೈತರು ಹೆದರುತ್ತಿದ್ದಾರೆ.

ಸ್ಥಳಕ್ಕೆ ಭೂ ವಿಜ್ಞಾನಿಗಳ ಭೇಟಿಗೆ ಆಗ್ರಹ:

ಈ ದಿಢೀರ್ ಭೂ ಕುಸಿತಕ್ಕೆ ನಿಖರವಾದ ಕಾರಣ ಏನೆಂಬುದು ಇನ್ನೂ ಪತ್ತೆಯಾಗಿಲ್ಲ. ಭೂಮಿಯ ಆಳದಲ್ಲಿ ಜಲಸ್ತರದ ಬದಲಾವಣೆಯಾಗಿದೆಯೇ ಅಥವಾ ಬೇರೆನಾದರೂ ನೈಸರ್ಗಿಕ ಪ್ರಕ್ರಿಯೆ ನಡೆದಿದೆಯೇ ಎಂಬ ಗೊಂದಲ ಮೂಡಿದೆ. ಹೀಗಾಗಿ, ತಕ್ಷಣವೇ ಭೂ ವಿಜ್ಞಾನಿಗಳು ಹಾಗೂ ಸಂಬಂಧಪಟ್ಟ ಕಂದಾಯ ಅಧಿಕಾರಿಗಳು ನಿಂಗಾಪುರ ಗ್ರಾಮಕ್ಕೆ ಭೇಟಿ ನೀಡಿ ಜಾಗವನ್ನು ಪರಿಶೀಲಿಸಬೇಕು ಮತ್ತು ಈ ಘಟನೆಯ ಹಿಂದಿನ ವೈಜ್ಞಾನಿಕ ಕಾರಣವನ್ನು ಪತ್ತೆಹಚ್ಚಿ ಜನರ ಆತಂಕ ದೂರ ಮಾಡಬೇಕು ಎಂದು ಗ್ರಾಮಸ್ಥರು ತೀವ್ರವಾಗಿ ಆಗ್ರಹಿಸಿದ್ದಾರೆ.

Must Read