ಮೈಸೂರು ದಸರಾ: ಇಂದು ರತ್ನಖಚಿತ ಸಿಂಹಾಸನಾ ಜೋಡಣಾ ಕಾರ್ಯ, ಪ್ರವಾಸಿಗರಿಗೆ ನಿರ್ಬಂಧ

ಹೊಸದಿಗಂತ ಡಿಜಿಟಲ್ ಡೆಸ್ಕ್:‌ 

ವಿಶ್ವ ವಿಖ್ಯಾತ ಮೈಸೂರು ದಸರಾಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಇದೇ ತಿಂಗಳ 15ರಿಂದ 24ರವೆರೆಗೆ ನಡೆಯಲಿರುವ ಉತ್ಸವಕ್ಕೆ ಅರಮನೆಯಲ್ಲಿ ಸಂಭ್ರಮ ಸಡಗರ ಮೇಳೈಸಿದೆ. ಇಂದು ಅರಮನೆಯಲ್ಲಿ ಖಜಾನೆಯಲ್ಲಿರುವ ರತ್ನಖಚಿತ ಸಿಹ್ನಾಸನಾ ಜೋಡಾಣಾ ಕಾರ್ಯ ನಡೆಯಲಿದ್ದು, ಮಧ್ಯಾಹ್ನದವರೆಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.

ಬೆಳಗ್ಗೆಯಿಂದಲೇ ಹೋಮ-ಹವನ, ಶಾಂತಿ ಪೂಜೆ, ನವಗ್ರಹ ಪೂಜೆಗಳು ಶುರುವಾಗಿದ್ದು, ಬೆಳಗ್ಗೆ 10.05ರಿಂದ 10.35ರವರೆಗೆ ಸಿಂಹಾಸನ ಜೋಡಣಾ ಕಾರ್ಯ ಪ್ರಾರಂಭವಾಗುತ್ತದೆ. ಆ ನಂತರ ಪಟ್ಟದ ಆನೆ, ಕುದುರೆ, ಹಸುಗಳಿಗೆ ಪೂಜೆ ನೆರವೇರಲಿದೆ.

ಸಿಂಹಾನಸ ಜೋಡಣೆ ಹಿನ್ನೆಲೆ ಚಿನ್ನ, ಮುತ್ತು, ರತ್ನ, ಪಚ್ಚೆ ಸೇರಿ ಅಮೂಲ್ಯ ಆಭರಣಗಳ ಸಿಂಹಾಸನದ ಬಿಡಿ ಭಾಗಗಳು ದರ್ಬಾರ್ ಹಾಲ್‌ಗೆ ತರಲಾಗುವುದು. ಈ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದು, ಬಿಗಿ ಭದ್ರತೆಯಲ್ಲಿ ಸಿಂಹಾಸನಾ ಜೋಡಣೆ ಕಾರ್ಯ ನಡೆಯುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!