ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ 19ನೇ ಆವೃತ್ತಿಯ ಏಷ್ಯನ್ ಗೇಮ್ಸ್ ಮುಕ್ತಾಯವಾಗಿದೆ. ಈ ಬಾರಿ ಭಾರತ ಅದ್ಭುತ ಸಾಧನೆ ಮಾಡಿದ್ದು, 107 ಪದಕಗಳೊಂದಿಗೆ ಏಷ್ಯನ್ ಗೇಮ್ಸ್‌ಗೆ ಗುಡ್‌ಬೈ ಹೇಳಿದೆ.
ಇದೇ ಮೊದಲ ಬಾರಿಗೆ ಭಾರತ ಪದಕ ಬೇಟೆಯಲ್ಲಿ ಶತಕ ಬಾರಿಸಿದೆ, ಚಿನ್ನ,ಬೆಳ್ಳಿ ಹಾಗೂ ಕಂಚಿನ ಪದಕಗಳು ಭಾರತಕ್ಕೆ ತಲುಪಿವೆ. ಈ ಬಗ್ಗೆ ಪ್ರಧಾನಿ ಮೋದಿ ಸಂತಸವ್ಯಕ್ತಪಡಿಸಿದ್ದಾರೆ.
ನಮ್ಮ ದೇಶಕ್ಕೆ ಇದೊಂದು ಐತಿಹಾಸಿಕ ಗೆಲುವು, ನಮ್ಮ ಅಸಾಧಾರಣ ಕ್ರೀಡಾಪಟುಗಳು 107 ಪದಕಗಳನ್ನು ತಂದುಕೊಟ್ಟಿದ್ದಾರೆ, ಕಳೆದ 60ವರ್ಷದಲ್ಲಿ ಇದು ಅದ್ಭುತ ಸಾಧನೆ. ಇಡೀ ರಾಷ್ಟ್ರವೇ ಹರ್ಷದಿಂದ ಕುಣಿಯುತ್ತಿದೆ. ನಮ್ಮ ಕ್ರೀಡಾಪಟುಗಳ ಅಸಾಧಾರಣ ಪ್ರತಿಭೆ, ಕಠಿಣ ಪರಿಶ್ರಮ ದೇಶಕ್ಕೆ ಹೆಮ್ಮೆ ತಂದಿದೆ. ಈ ಗೆಲುವು ಸದಾ ನೆನಪಿಡುವಂತದ್ದು ಎಂದಿದ್ದಾರೆ.
ಏಷ್ಯನ್ ಗೇಮ್ಸ್‌ನಲ್ಲಿ ಒಟ್ಟು 28 ಚಿನ್ನ, 38 ಬೆಳ್ಳಿ ಹಾಗೂ 41 ಕಂಚಿನ ಪದಕಗಳನ್ನು ಗಳಿಸಿದೆ. ಈ ಮೂಲಕ 19ನೇ ಆವೃತ್ತಿಯಲ್ಲಿ ಹೆಚ್ಚಿನ ಪದಕ ಗಳಿಸಿದ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. 2027 ರಲ್ಲಿ ಏಷ್ಯನ್ ಗೇಮ್ಸ್‌ನ 20ನೇ ಆವೃತ್ತಿ ನಡೆಯಲಿದ್ದು, ದೋಹಾದಲ್ಲಿ ಗೇಮ್ಸ್ ನಡೆಯುವ ನಿರೀಕ್ಷೆ ಇದೆ.