ಯೋಗ ವೈಯಕ್ತಿಕ ಹಂತದಲ್ಲಷ್ಟೇ ಅಲ್ಲ, ವಿಶ್ವಕ್ಕೆ ಶಾಂತಿ ತರಬಲ್ಲದು- ಪ್ರಧಾನಿ ನರೇಂದ್ರ ಮೋದಿ

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಮೈಸೂರಿನಲ್ಲಿ ಎಂಟನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಹೇಳಿದ ಅಂಶಗಳು ಇವು-

  • ಯೋಗ ಶಾಂತಿಯನ್ನು ತರುತ್ತದೆ. ಈ ಶಾಂತಿ ಕೇವಲ ವೈಯಕ್ತಿಕ ನೆಲೆಯಲ್ಲಿ ಮಾತ್ರವಲ್ಲ. ದೇಶಕ್ಕೆ ಹಾಗೂ ವಿಶ್ವಕ್ಕೆ ಶಾಂತಿಯನ್ನು ತರುತ್ತದೆ ಯೋಗ.
  • ಯೋಗವನ್ನು ಕೇವಲ ವೈಯಕ್ತಿಕ ಉದ್ದೇಶಕ್ಕಲ್ಲದೇ ಮಾನವತೆಯ ಶಾಂತಿಗೋಸ್ಕರ ಮಾಡಬೇಕು ಎಂದೇ ಈ ವರ್ಷದ ಯೋಗ ದಿನಾಚರಣೆ ಆಶಯವನ್ನು ‘ಮಾನವತೆಗಾಗಿ ಯೋಗ’ ಎಂದು ಇಡಲಾಗಿದೆ.
  • ಇಡೀ ವಿಶ್ವ, ಅದರ ವ್ಯಾಪಕತೆ ನಮ್ಮ ದೇಹ- ಆತ್ಮಗಳಲ್ಲೇ ಇದೆ. ನಮ್ಮೊಳಗೇ ಇರುವ ವಿಶ್ವದ ಜತೆ ನಾವು ಸಂಪರ್ಕ ಸಾಧಿಸುವುದಕ್ಕೆ, ಅದನ್ನು ಅರಿತುಕೊಳ್ಳುವುದಕ್ಕೆ ಯೋಗ ಸಹಾಯ ಮಾಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!