ಹಿಂದೂ ಧರ್ಮದಲ್ಲಿ ಸರ್ಪಗಳನ್ನು ಪೂಜನೀಯ ರೂಪದಲ್ಲಿ ಕಾಣಲಾಗುತ್ತದೆ. ದೇವರ ರೂಪದಲ್ಲಿ ಪೂಜಿಸಲಾಗುತ್ತದೆ. ಕೆಲವೊಂದು ಬಾರಿ ಹಾವುಗಳು ನಮ್ಮ ದಾರಿಗೆ ಎದುರಾಗುತ್ತವೆ. ಹೋಗೋ ದಾರಿಯಲ್ಲಿ ಇದ್ದಕ್ಕಿದ್ದಂತೆ ಹಾವುಗಳು ಕಂಡರೂ ಅದು ಹಲವಾರು ಅರ್ಥಗಳನ್ನು ಸೂಚಿಸುತ್ತದೆ. ಹಾಗಾದ್ರೆ ಅದು ಶುಭದ ಸಂಕೇತವೋ ಅಥವಾ ಅಶುಭವೋ ಎಂಬುದನ್ನು ತಿಳಿಯಿರಿ.
ನೀವು ಯಾವುದಾದರೂ ಪ್ರಮುಖ ಕೆಲಸಕ್ಕಾಗಿ ಪ್ರಯಾಣಿಸುತ್ತಿದ್ದ ವೇಳೆ ಬಲದಿಂದ ಎಡಕ್ಕೆ ಹಾವು ರಸ್ತೆ ದಾಟುತ್ತಿರುವುದನ್ನು ನೋಡಿದರೆ, ನೀವು ಹೋಗುವ ಕೆಲಸದಲ್ಲಿ ನಿಮಗೆ ಯಶಸ್ಸು ಸಿಗುತ್ತದೆ ಎಂದು ನಂಬಲಾಗಿದೆ.
ನೀವು ದಾರಿಯಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ನಿಮಗೇನಾದರೂ ಎಡಭಾಗದಿಂದ ಹಾವು ರಸ್ತೆ ದಾಟುತ್ತಿರುವುದನ್ನು ನೋಡಿದರೆ ಅಂದು ನೀವು ಹೋಗುವ, ಮಾಡುವ ಕೆಲಸದಲ್ಲಿ ಯಶಸ್ಸು ಸಿಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತದೆ.
ಎಲ್ಲೋ ಹೋಗುವಾಗ ಸತ್ತ ಹಾವನ್ನು ನೋಡಿದರೆ ಅದು ಅಶುಭದ ಸಂಕೇತ ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಪರಿಣಾಮಗಳನ್ನು ತಪ್ಪಿಸಲು ಶಿವನಿಗೆ ಜಲಭಿಷೇಕ ಮಾಡುವುದು ಉತ್ತಮ.
ಭಾರತೀಯ ಸಂಸ್ಕೃತಿಯಲ್ಲಿ ಹಾವುಗಳಿಗೆ ವಿಶೇಷ ಸ್ಥಾನವಿದೆ. ಅವುಗಳನ್ನು ಶಿವನೊಂದಿಗೆ ಮತ್ತು ನಾಗ ದೇವತೆಗಳೊಂದಿಗೆ ಸಂಬಂಧಿಸಲಾಗಿದೆ. ಕೆಲವು ಸಂದರ್ಭಗಳಲ್ಲಿ ಹಾವುಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಆದರೆ ಕೆಲವು ಸಂದರ್ಭಗಳಲ್ಲಿ ಅವು ಭಯ ಮತ್ತು ಎಚ್ಚರಿಕೆಯ ಸಂಕೇತವಾಗಿರಬಹುದು.