ಥ್ರಿಲ್ಲರ್‌ ಸಿರೀಸ್‌ ಮೂಲಕ ಒಟಿಟಿಗೆ ಎಂಟ್ರಿ ಕೊಡಲಿದ್ದಾರಾ ನಾಗಚೈತನ್ಯ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಕ್ಕಿನೇನಿ ನಾಗಾರ್ಜುನ ಹಾಗೂ ನಾಗ ಚೈತನ್ಯ ಒಟ್ಟಿಗೆ ಒಟಿಟಿಗೆ ಕಾಲಿಡಲಿದ್ದಾರೆ ಅನ್ನೋ ಸುದ್ದಿ ಕೇಳಿಬರುತ್ತಿದೆ.
ಇಬ್ಬರೂ ಒಂದೇ ವೆಬ್‌ ಸರಣಿಯಲ್ಲಿ ನಟಿಸುತ್ತಿಲ್ಲ ಬದಲಿಗೆ ಬೇರೆ ಸೀರೀಸ್‌ ಗಳಲ್ಲಿ ನಟಿಸೋಕೆ ರೆಡಿಯಾಗಿದ್ದಾರೆ. ನಾಗರ್ಜುನ ಹಾಗೂ ನಾಗಚೈತನ್ಯ ಇಬ್ಬರ ಸಿರೀಸ್‌ ಕೂಡ ಒಟ್ಟಿಗೆ ರಿಲೀಸ್‌ ಆಗುವ ನಿರೀಕ್ಷೆ ಕೂಡ ಇದೆ.
ಧೂಥ ಎಂಬ ವೆಬ್‌ ಸಿರೋಸ್‌ ನಲ್ಲಿ ನಾಗ ಚೈತನ್ಯ ನಟಿಸಲಿದ್ದು, ಇದು ಹಾರರ್‌ ಹಾಗೂ ಥ್ರಿಲ್ಲರ್‌ ವೆಬ್‌ ಸರಣಿ ಆಗಿದೆ. ಚಿತ್ರದಲ್ಲಿ ನಟಿಯಾಗಿ ತಮಿಳು ನಟಿ ಪ್ರಿಯಾ ಭವ್ಯ ಶಂಕರ್‌ ನಟಿಸಲಿದ್ದಾರೆ.
ಇನ್ನು ನಾಗಾರ್ಜುನ ಅವರಿಗೆ ಕೂಡ ಒಟಿಟಿಯ ಸಿರೀಸ್‌ ನಲ್ಲಿ ಆಫರ್‌ ಸಿಕ್ಕಿದೆ ಎಂದು ಹೇಳಲಾಗುತ್ತಿದ್ದು, ವೆಬ್‌ ಸರಣಿಯ ಹೆಸರು, ಅದರ ನಿರ್ದೇಶನ ಯಾರು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಮಾಹಿತಿ ತಿಳಿಯಬೇಕಿದೆ.
ನಾಗಾರ್ಜುನ ಅಕ್ಕಿನೇನಿ ಮತ್ತು ನಾಗ ಚೈತನ್ಯ ಮುಂಬರುವ ಬಂಗಾರರಾಜು ಚಿತ್ರದಲ್ಲಿ  ಒಟ್ಟಿಗೆ ತೆರೆ ಹಂಚಿಕೊಳ್ಳಲು ಸಿದ್ಧರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!