ಶಾರುಖ್ ಸಿನಿಮಾಗೆ ವಿಕ್ಕಿ ಕೌಶಲ್ ಎಂಟ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಜು ಸಿನಿಮಾ ಹಿಟ್ ಆದ ನಂತರ ಸ್ಟಾರ್ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಮತ್ಯಾವ ಸಿನಿಮಾವನ್ನು ಕೈಗೆತ್ತಿಕೊಂಡೇ ಇಲ್ಲ. ಆದರೆ ಶಾರುಖ್ ಖಾನ್ ಜೊತೆ ಸಿನಿಮಾ ಒಂದಕ್ಕೆ ಪ್ಲಾನ್ ಮಾಡುತ್ತಿರುವ ವಿಷಯ ಎಲ್ಲೆಡೆ ಹಬ್ಬಿತ್ತು. ಶಾರುಖ್ ಜೊತೆ ಮಾಡುತ್ತಿರುವ ಈ ಸಿನಿಮಾಗೆ ವಿಕ್ಕಿ ಕೌಶಲ್ ಕೂಡ ಜೊತೆಯಾಗಲಿದ್ದಾರಂತೆ.

ಶಾರುಖ್ ಇದೀಗ ಪಠಾಣ್ ಹಾಗೂ ತೆಲುಗಿನ ಸಿನಿಮಾ ಒಂದರಲ್ಲಿ ಬ್ಯುಸಿಯಾಗಿದ್ದು, ಡೇಟ್ಸ್ ಸಮಸ್ಯೆಯಿಂದ ಸಿನಿಮಾ ಶೂಟ್ ಆರಂಭವಾಗಿಲ್ಲ. ಸಂಜು ಸಿನಿಮಾದಲ್ಲಿಯೂ ವಿಕ್ಕಿ ಕೌಶಲ್ ಪಾತ್ರವೊಂದನ್ನು ಮಾಡಿದ್ದು, ಹಿರಾನಿ ಹಾಗೂ ವಿಕ್ಕಿ ನಡುವೆ ಒಳ್ಳೆಯ ಬಾಂಧವ್ಯ ಇದೆ. ಈ ಕಾರಣದಿಂದ ಶಾರುಖ್ ಜೊತೆ ಅಭಿನಯಿಸುವ ಚಾನ್ಸ್ ವಿಕ್ಕಿಗೆ ಸಿಕ್ಕಿದೆ ಎಂದು ಹೇಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!