ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್ ನ ಯಂಗ್ ಹೀರೋ ನಾಗಶೌರ್ಯ ಬೆಂಗಳೂರು ಮೂಲದ ಜನಪ್ರಿಯ ಇಂಟೀರಿಯರ್ ಡಿಸೈನರ್ ಅನುಷಾ ಅವರೊಂದಿಗೆ ಇಂದು ಹಸೆಮಣೆ ಏರಿದರು. ಇಂದು (ನವೆಂಬರ್ 20) ರಂದು ಬೆಂಗಳೂರಿನಲ್ಲಿ ನಾಗಶೌರ್ಯ, ಅನುಷಾ ಮದುವೆ ಅದ್ದೂರಿಯಾಗಿ ನೆರವೇರಿತು.
ಶನಿವಾರ ರಾತ್ರಿ ಅವರ ಪ್ರೀ ವೆಡ್ಡಿಂಗ್ ಫೋಟೋಶೂಟ್ ಕೂಡ ನಡೆದಿತ್ತು. ಈ ಮದುವೆಯಲ್ಲಿ ಎರಡೂ ಕುಟುಂಬಸ್ಥರು, ಆಪ್ತರು, ಅನೇಕ ಸಿನಿಮಾ ತಾರೆಯರು ಪಾಲ್ಗೊಂಡಿದ್ದರು.