Saturday, December 9, 2023

Latest Posts

ಮಡಿಕೇರಿಯಲ್ಲಿ ಗಮನ ಸೆಳೆಯುತ್ತಿದೆ ಪುರಾತನ ನಾಣ್ಯ- ನೋಟುಗಳ ಪ್ರದರ್ಶನ

ಹೊಸದಿಗಂತ ವರದಿ, ಮಡಿಕೇರಿ:
ವಿಶ್ವ ಪಾರಂಪರಿಕ ಸಪ್ತಾಹ ಪ್ರಯುಕ್ತ ಮೂರು ದಿನಗಳ ಕಾಲ ಪುರಾತತ್ವ ಸಂಗ್ರಹಾಲಯ ಮತ್ತು ಪಾರಂಪರಿಕ ಇಲಾಖೆ ವತಿಯಿಂದ ಏರ್ಪಡಿಸಲಾಗಿರುವ ಹಳೇ ನೋಟುಗಳು ಹಾಗೂ ನಾಣ್ಯಗಳ 149 ನೇ ಪ್ರದರ್ಶನಕ್ಕೆ ಸರ್ಕಾರಿ ಪ್ರಾಚ್ಯ ವಸ್ತು ಸಂಗ್ರಹಾಲಯದಲ್ಲಿ ಡಾ.ಎಂ.ಜಿ.ಪಾಟ್ಕರ್ ಅವರು ಚಾಲನೆ ನೀಡಿದರು.
ಹುಣಸೂರಿನ ಪಿ.ಕೆ.ಕೇಶವ ಮೂರ್ತಿ ಅವರು ಸಂಗ್ರಹಿಸಿರುವ ಹಳೇ ನೋಟು ಮತ್ತು ನಾಣ್ಯಗಳ ಪ್ರದರ್ಶನದಲ್ಲಿ ಕ್ರಿಸ್ತ ಪೂರ್ವ 5ನೇ ಶತಮಾನದಲ್ಲಿ ಬಳಕೆಗೆ ಬಂದ ಭಾರತದ ಮೊಟ್ಟ ಮೊದಲ ಪಂಚ್‍ಮಾರ್ಕ್, ನಾಣ್ಯಗಳು, ಗ್ರೀಕ್, ರೋಮನ್, ಕುಷಾನರು, ಗುಪ್ತ, ಶಾತವಾಹನ, ಕದಂಬ, ಚೋಳ, ಪಾಂಡ್ಯ ಮುಂತಾದ ಪ್ರಾಚೀನ ಭಾರತದ ನಾಣ್ಯಗಳು. ವಿವಿಧ ರಾಷ್ಟ್ರಗಳ ನೋಟುಗಳು ಗಮನ ಸೆಳೆಯುತ್ತಿವೆ.

ಪಿ.ಕೆ.ಕೇಶವ ಮೂರ್ತಿ ಅವರು ಅಪರೂಪದ ನಾಣ್ಯ ನೋಟುಗಳನ್ನು ಸಂಗ್ರಹಿಸಿ ಪ್ರದರ್ಶನ ಮಾಡುತ್ತಿರುವುದು ವಿಶೇಷವಾಗಿದೆ. 1992ರಲ್ಲಿ ನಗರದಲ್ಲಿ ಆರಂಭಿಸಿದ ಮೊದಲ ಪ್ರದರ್ಶನವು ಈಗ 149 ನೇ ಪ್ರದರ್ಶನ ಕಾಣುತ್ತಿರುವುದು ವಿಶೇಷವಾಗಿದೆ.

ಇದರೊಂದಿಗೆ ಮೈಸೂರು, ಬಿಜಾಪುರ, ತಿರುವಾಂಕೂರು, ಹೈದರಾಬಾದ್, ಕಛ್, ಬರೋಡ, ಗ್ವಾಲಿಯರ್ ಮತ್ತಿತರ ಭಾರತೀಯ ಸಂಸ್ಥಾನಗಳ ನಾಣ್ಯಗಳು, ಸ್ವಾತಂತ್ರ್ಯ ಪೂರ್ವದ ಬ್ರಿಟೀಷ್, ಪೋರ್ಚ್’ಗೀಸರ ಮತ್ತು ಸ್ವಾತಂತ್ರ್ಯ ಭಾರತದ ನಾಣ್ಯ, ನೋಟುಗಳು, ಸ್ಮರಣಾರ್ಥ ಬಿಡುಗಡೆಯಾದ 1000, 150, 100, 75, 60, 50, 20, 10 ರೂ.ಗಳ ನಾಣ್ಯಗಳು, ನೂರಾರು ದೇಶ-ವಿದೇಶಗಳ ನಾಣ್ಯ, ನೋಟುಗಳು, ತಾಮ್ರ, ಚಿನ್ನ, ಬೆಳ್ಳಿ, ಸೀಸ ಹಾಗೂ ಹಿತ್ತಾಳೆ ಮುಂತಾದ ಲೋಹಗಳ ನಾಣ್ಯಗಳು, ವಿದೇಶಗಳ ಚಿನ್ನದಿಂದ ಮಾಡಿದ ನೋಟುಗಳು, ಹೀಗೆ ನೂರಾರು ವರ್ಷಗಳ ಅಪೂರ್ವ ಸಂಗ್ರಹವನ್ನು ಒಂದೇ ಸ್ಥಳದಲ್ಲಿ ವೀಕ್ಷಿಸಬಹುದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!