Wednesday, November 29, 2023

Latest Posts

ರಾಜಕೀಯ ಅಷ್ಟೇ ಅಲ್ಲ, ನಳಮಹಾರಾಜನೂ ಹೌದು: ಮಂತ್ರಿ ಮಾಡಿದ ವಡಾ‌ ಪಾವ್ ವೈರಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಸದಾ ವೈವಿಧ್ಯಮಯ ವಿಡಿಯೋಗಳೊಂದಿಗೆ ಜನರಿಗೆ ಚಿರಪರಿಚಿತರಾಗಿರುವ ಸಚಿವ ಇದೀಗ ಸ್ವತಃ ತಮ್ಮ ಕೈಯಿಂದ ಮಾಡಿರುವ ಅಡುಗೆಯ ವಿಡಿಯೋವನ್ನು ಹರಿಬಿಟ್ಟಿದ್ದಾರೆ.

ಈ ಹಿಂದೆ ಪಾನಿ ಪುರಿ ಮಾಡುವ ವಿಡಿಯೋ ವೈರಲ್ ಆಗಿತ್ತು. ಈಗ ಮತ್ತೊಂದು ಫೇಮಸ್ ಸ್ಟ್ರೀಟ್ ಫುಡ್ ವಡಾ ಪಾವ್ ತಯಾರಿಸಿದ್ದು ಮಾತ್ರವಲ್ಲ..ಅದರ ರುಚಿ ನೋಡಿದ್ದಾರೆ.

ಮುಂಬೈನಿಂದ ಕೊಹಿಮಾವರೆಗೂ ವಡಾ ಪಾವ್ ಪ್ರಯಾಣ’ ಎಂಬ ಶೀರ್ಷಿಕೆಯಡಿ ತೆಮ್ಜೆನ್ ಹಂಚಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿದೆ. ‘ನೀವು ಬಹುಮುಖ ಪ್ರತಿಭೆ ಸಾರ್..ನೆಕ್ಸ್ಟ್ ಟೈಮ್ ಟ್ರೈ ಮಾಡಿ ಬೆಂಗಾಲಿ ಡಿಶ್ʼ ಎಂಬ ಕಮೆಂಟ್‌ಗಳು ಹರಿದುಬರುತ್ತಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!