ನಾಗಮಂಗಲ ಗಲಭೆ ಕೇಸ್: ಮತ್ತೊಬ್ಬ ಅಧಿಕಾರಿಯ ತಲೆದಂಡ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಡ್ಯ ಜಿಲ್ಲೆಯ ನಾಗಮಂಗಲ ಗಲಭೆ ಕೇಸ್ ಸಂಬಂಧ ಮತ್ತೊಬ್ಬರು ಅಧಿಕಾರಿಯ ತಲೆದಂಡವಾಗಿದೆ.

ಕರ್ತವ್ಯ ನಿರ್ಲಕ್ಷ್ಯ ಆರೋಪ ಹಿನ್ನೆಲೆ ನಾಗಮಂಗಲ ಡಿವೈಎಸ್‌ಪಿ ಡಾ.ಸುಮೀತ್ ಅಮಾನತುಗೊಳಿಸಿ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಆದೇಶ ಹೊರಡಿಸಿದ್ದಾರೆ.

ಡಾ.ಸುಮೀತ್ ಜಾಗಕ್ಕೆ ಪ್ರಭಾರ ಡಿವೈಎಸ್‌ಪಿ ಆಗಿ ಶಿವಮೂರ್ತಿ ಎಂಬುವವರನ್ನು ನೇಮಕ ಮಾಡಲಾಗಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ನಾಗಮಂಗಲ ನಗರ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್​ ಆಗಿದ್ದ ಅಶೋಕ್‌ ಕುಮಾರ್‌ ಅವರನ್ನು ಅಮಾನತು ಮಾಡಲಾಗಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!