ರಾಜ್ಯಾದ್ಯಂತ ಇಂದು ಸಂಭ್ರಮದ ನಾಗರಪಂಚಮಿಯನ್ನು ಆಚರಿಸಲಾಗುತ್ತಿದೆ. ಹಿಂದೂ ಪುರಾಣದಲ್ಲಿ ನಾಗರ ಪಂಚಮಿಗೆ ವಿಶೇಷ ಸ್ಥಾನವಿದೆ. ಭಾರತದ ಹಲವು ಭಾಗಗಳಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ಶ್ರಾವಣ ಮಾಸಾದ ಶುಕ್ಲಪಕ್ಷದ ಪಂಚಮಿಯಂದು ಈ ಹಬ್ಬ ಆಚರಣೆ ಮಾಡಲಾಗುತ್ತದೆ.

ಕೆಲವರು ನಾಗರ ಪಂಚಮಿಯಂದು ಮಾಡುವ ಪ್ರತೀ ವಿಧಿವಿಧಾನವನ್ನು ಗಣೇಶನ ಹಬ್ಬದಂದು ಮಾಡುತ್ತಾರೆ. ಸಾಮಾನ್ಯವಾಗಿ ನಾಗದೇವತೆಯ ಕಲ್ಲಿನ ಮೂರ್ತಿ ಅಥವಾ ಹುತ್ತಕ್ಕೆ ಹಾಲೆರೆದು ಪೂಜಿಸಿ ನಮ್ಮನ್ನು ರಕ್ಷಿಸಿ ಎಂದು ಬೇಡಿಕೊಳ್ಳುತ್ತಾರೆ.
ಹಬ್ಬಗಳ ಸಾಲಿಗೆ ನಾಂದಿ
ಈ ಹಬ್ಬವನ್ನು ಅಣ್ಣ-ತಂಗಿ ಸೇರಿ ಪೂಜಿಸುವ ಹಬ್ಬವೆಂದು ಹೇಳಲಾಗುತ್ತದೆ. ನಾಗ ಪಂಚಮಿ ಹಬ್ಬಗಳ ಸಾಲಿಗೆ ನಾಂದಿ ಹಾಡುತ್ತದೆ. ಈ ಹಬ್ಬದ ನಂತರ ವರಮಹಾಲಕ್ಷ್ಮಿ, ರಕ್ಷಾಬಂಧನ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದಸರಾ ಹಾಗೂ ದೀಪಾವಳಿ ಆಗಮಿಸುತ್ತದೆ. ನಾಗರ ಪಂಚಮಿಯನ್ನು ಬೆಳಗ್ಗೆಯೇ ಎದ್ದು ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಹುತ್ತ ಅಥವಾ ನಾಗಕಲ್ಲಿಗೆ ಪೂಜೆ ಮಾಡಲಾಗುತ್ತದೆ. ನಂತರ ಅಲ್ಲಿಯೇ ಇರುವ ಕೆಲ ಮುತ್ತೈದೆತ
ಹಬ್ಬದ ಕಥೆ ಏನು?
ಆಗಿನ ಜನಪದರ ಕಥೆ ಪ್ರಕಾರ ಈ ಹಬ್ಬ ಬರುವುದು ಮುಂಗಾರಿನ ರಭಸದ ದಿನಗಳಲ್ಲಿ. ಕೃಷಿ ಚಟುವಟಿಕೆ ಚೆನ್ನಾಗಿ ಆಗುತ್ತಿರುವ ವೇಳೆ ಕೀಟ, ಮಿಡತೆಗಳು ಫಸಲು ತಿನ್ನಲು ಆಗಮಿಸುತ್ತವೆ. ಇದರ ಜೊತೆಗೆ ಕಪ್ಪೆ ಹಾಗೂ ಇಲಿಗಳ ಹಾವಳಿ ತಡೆಯೋದೂ ಜನರಿಗೆ ಕಷ್ಟವಾಗಿತ್ತು. ಆಗ ನಾಗರನು ಇಲಿ ಕಪ್ಪೆಗಳ ಹಾವಳಿಯನ್ನು ನಿಯಂತ್ರಿಸುತ್ತಾನೆ ಎಂದು ನಾಗರ ದೇವರಿಗೆ ವಂದನೆ ತಿಳಿಸುತ್ತಾರೆ.

ಅಣ್ಣ-ತಂಗಿಗೆ ಯಾಕೆ ಸ್ಪೆಷಲ್?
ಹಿಂದಿನ ಕಾಲದಲ್ಲಿ ಒಬ್ಬ ತಂಗಿ ಹಾಗೂ ನಾಲ್ಕು ಜನ ಅಣ್ಣಂದಿರು ಇದ್ದರು. ಆ ನಾಲ್ಕೂ ಅಣ್ಣಂದಿರಿಗೆ ಹಾವು ಕಚ್ಚಿದ್ದು, ಕೆಳಕ್ಕೆ ಬಿದ್ದಿದ್ದರು. ಆಗ ತಂಗಿ ಕಣ್ಣೀರಿಡುತ್ತಾ ಇವರಲ್ಲಿ ನನ್ನ ಒಬ್ಬ ಅಣ್ಣನನ್ನಾದರೂ ಬದುಕಿಸಿಕೊಡಿ. ಅಣ್ಣ ಎಂದು ಕೂಗಲು ಯಾರೂ ಇಲ್ಲದಂತೆ ಮಾಡಬೇಡ ಎಂದು ನಾಗರಹಾವಿಗೆ ಕೈ ಮುಗಿದು ಬೇಡಿಕೊಂಡಳು. ಆಕೆಯ ನೋವನ್ನು ನೋಡಲಾರದೇ ನಾಗರಹಾವು ಒಬ್ಬ ಅಣ್ಣನನ್ನು ಬದುಕಿಸಿಕೊಟ್ಟಿತು. ಅಣ್ಣ ತಂಗಿ ಇಬ್ಬರೂ ಕೂಡಿ ನಾಗರ ಪೂಜೆ ಆರಂಭಿಸಿದರು ಎನ್ನಲಾಗಿದೆ.
ಈ ತಪ್ಪುಗಳನ್ನು ಮಾಡಬೇಡಿ
ಈ ದಿನದಂದು ಹಾವುಗಳಿಗೆ ಅಗೌರವ ತೋರುವುದು, ಹಿಂಸೆ ನೀಡುವುದು, ಹೊಡೆಯುವುದು ಪಾಪವೆಂದು ಹೇಳಲಾಗುತ್ತದೆ. ಈ ರೀತಿ ಮಾಡಿದರೆ ನಿಮ್ಮ ಮೇಲೆ ಮಾತ್ರವಲ್ಲ ನಿಮ್ಮಿಡೀ ಕುಟುಂಬದ ಮೇಲೆಯೂ ಪರಿಣಾಮ ಬೀರುತ್ತದೆ. ಇನ್ನು ಈ ದಿನ ಕಬ್ಬಿಣದ ಪಾತ್ರೆಗಳಲ್ಲಿ ಅಡುಗೆ ಮಾಡಬೇಡಿ, ಭೂಮಿಗೆ ನೋವು ಮಾಡಬೇಡಿ.



