FESTIVE | ನಾಳೆ ನಾಗರ ಪಂಚಮಿ ಹಬ್ಬ, ಇಲ್ಲಿದೆ ಪೂಜಾ ವಿಧಾನ, ಶುಭ ಮಹೂರ್ತದ ಮಾಹಿತಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಯನ್ನು ನಾಳೆ ಆಚರಿಸಲಾಗುತ್ತದೆ. ಹಿಂದೂ ಪಂಚಾಂಗ ಪ್ರಕಾರ ಈ ವರ್ಷ ನಾಗರ ಪಂಚಮಿಯನ್ನು ಆಗಸ್ಟ್‌ 9 ರಂದು ಆಚರಿಸಲಾಗುವುದು.

ಆಗಸ್ಟ್‌ 9 ಬೆಳಗ್ಗೆ 06:07ರಿಂದ 8:38ರವರೆಗೆ ಶುಭ ಮಹೂರ್ತವಿದ್ದು, ಈ ಸಂದರ್ಭದಲ್ಲಿ ಪೂಜೆ ಮಾಡಬಹುದಾಗಿದೆ.

ಈ ಸಮಯದಲ್ಲಿ ಮದುವೆ ಮಾಡಿಕೊಟ್ಟ ಹೆಣ್ಮಕ್ಕಳು ತವರಿಗೆ ಬಂದು ಈ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗುತ್ತಾರೆ. ಈ ದಿನ ಹಿಟ್ಟಿನಿಂದ ಹಾವಿನ ಮೂರ್ತಿ ಮಾಡಿ ಅಥವಾ ಹುತ್ತಕ್ಕೆ ಹಾಲೆರೆದು ಬರ್ತಾರೆ. ಜೊತೆಗೆ ನೈವೇದ್ಯ ಕೂಡ ಅರ್ಪಿಸುತ್ತಾರೆ. ಈ ಹಬ್ಬವನ್ನು ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದೆಲ್ಲಡೆ ಆಚರಿಸುತ್ತಾರೆ.

ಕಂಕಣ ಭಾಗ್ಯ ಕೂಡಿ ಬರದಿದ್ದರೆ ಈ ದಿನ ಹಾಲೆರೆದರೆ ಜಾತಕದಲ್ಲಿನ ದೋಷ ದೂರಾಗುವುದು, ಕಂಕಣ ಭಾಗ್ಯ ಕೂಡಿ ಬರುವುದು ಎಂದು ಹೇಳಲಾಗುವುದು. ಕೆಲವೊಮ್ಮೆ ಯಾವುದೋ ಸಂದರ್ಭದಲ್ಲಿ ಹಾವಿಗೆ ಹಾನಿ ಮಾಡಿದ್ದರೆ, ಗಾಡಿಯಲ್ಲಿ ಅಥವಾ ತೋಟದಲ್ಲಿ ಹೀಗೆ ಯಾವುದೇ ಸಮಯದಲ್ಲಿ ಹಾವಿಗೆ ಹಾನಿ ಮಾಡಿದ್ದೇನೆ ಎಂದು ಅಂದುಕೊಂಡವರು ಸರ್ಪದೋಷ ಬಾರದೇ ಇರಲಿ ಎನ್ನುವ ಕಾರಣಕ್ಕೆ ನಾಳೆ ವಿಶೇಷ ಪೂಜೆ ಮಾಡುತ್ತಾರೆ.

ನಾಗರಪಂಚಮಿಯನ್ನು ಹಬ್ಬದ ಅಡುಗೆ ಮಾಡಲಾಗುತ್ತದೆ. ಅದರ ಜೊತೆಗೆ ಅಕ್ಕಿಯ ತಂಬಿಟ್ಟು ಹಾಗೂ ಎಳ್ಳಿನ ಚಿಗಣಿ ಮಾಡಿ ದೇವರಿಗೆ ಅರ್ಪಿಸಿ ನಂತರ ಪ್ರಸಾದದಂತೆ ಸೇವನೆ ಮಾಡಲಾಗುತ್ತದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!