ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ನಡೆಸುತ್ತಿರುವ ಮೈಸೂರು ಚಲೋ ಪಾದಯಾತ್ರೆ ಆರನೇ ದಿನಕ್ಕೆ ಕಾಲಿಟ್ಟಿದೆ.
ಐದನೇ ದಿನದ ಪಾದಯಾತ್ರೆ ಮಂಡ್ಯ ಜಿಲ್ಲೆಯ ತೂಬಿನಕೆರೆ ಗ್ರಾಮದಲ್ಲಿ ಕೊನೆಗೊಂಡಿತು. ಇಂದಿನ ಪಾದಯಾತ್ರೆ ತೂಬಿನಕೆರೆ ಗ್ರಾಮದಿಂದ ಶ್ರೀರಂಗಪಟ್ಟಣದವರೆಗೆ ಶಂಖ ನಾದದೊಂದಿಗೆ ಇಂದಿನ ನಡಿಗೆ ಆರಂಭವಾಯಿತು. ಪಾದಯಾತ್ರೆ ಆರಂಭವಾಗಿ ಎರಡು ಕಿ.ಮೀ. ನಂತರ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸೇರಿಕೊಳ್ಳಲಿದ್ದಾರೆ.