Saturday, October 1, 2022

Latest Posts

ಹಳಿ ತಪ್ಪಿದ ಶಿವನಾಥ್‌ ಎಕ್ಸ್‌ಪ್ರೆಸ್‌ ರೈಲಿನ ಎರಡು ಬೋಗಿಗಳು: ತಪ್ಪಿದ ದುರಂತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಹಾರಾಷ್ಟ್ರದ ನಾಗ್ಪುರಕ್ಕೆ ತೆರಳುತ್ತಿದ್ದ ಶಿವನಾಥ್ ಎಕ್ಸ್‌ಪ್ರೆಸ್ ರೈಲಿನ ಎರಡು ಬೋಗಿಗಳು ಛತ್ತೀಸ್‌ಗಢ್‌ನ ಡೊಂಗರ್‌ಗಢದಲ್ಲಿ ಹಳಿತಪ್ಪಿರುವ ಘಟನೆ ಮಂಗಳವಾರ ನಡೆದಿದೆ. ಈ ಬಗ್ಗೆ ಭಾರತೀಯ ರೈಲ್ವೆ ಸ್ಪಷ್ಟಪಡಿಸಿದ್ದು, ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ತಿಳಿಸಿದ್ದಾರೆ.

ರೈಲು ಸಂಖ್ಯೆ. 18239, ಶಿವನಾಥ್ ಎಕ್ಸ್‌ಪ್ರೆಸ್ ಗೊಂಡಿಯಾ ನಿಲ್ದಾಣದಿಂದ ಇಟ್ವಾರಿ ನಿಲ್ದಾಣದ ಕಡೆಗೆ ಹೋಗುತ್ತಿದ್ದಾಗ ಎರಡು ಕೋಚ್‌ಗಳು ಸೆಕ್ಷನ್ 134400 ಮತ್ತು ಸೆಕ್ 084114 ಛತ್ತೀಸ್‌ಗಢದ ನಾಗ್ಪುರ ವಿಭಾಗದ ಡೊಂಗರ್‌ಗಢ್ ಯಾರ್ಡ್‌ನಲ್ಲಿ ಇಂದು ಮುಂಜಾನೆ 3:42ಕ್ಕೆ ಹಳಿತಪ್ಪಿದ್ದಾಗಿ ತಿಳಿದಿದೆ. ರೈಲು ಸಾಕಷ್ಟು ನಿಧಾನಗತಿಯಲ್ಲಿ ಚಲಿಸುತ್ತಿದ್ದರಿಂದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

ವಿಭಾಗೀಯ ರೈಲ್ವೆ ಅಧಿಕಾರಿ (DRM) ಮತ್ತು ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ (Sr. DOM) ಸೇರಿದಂತೆ ಹಿರಿಯ ಅಧಿಕಾರಿಗಳು, ತಾಂತ್ರಿಕ ತಂಡ, ವೈದ್ಯಕೀಯ ತಂಡ ಕೂಡ ಸ್ಥಳಕ್ಕೆ ತಲುಪಿದೆ. ಎಲ್ಲವನ್ನು ಸರಿಮಾಡಲು ತಾಂತ್ರಕ ತಂಡಕ್ಕೆ ಎರಡು ಗಂಟೆ ಸಮಯ ಬೇಕಾಯಿತು. ಎಲ್ಲಾ ಪ್ರಯಾಣಿಕರನ್ನು ಸ್ಲೀಪರ್ ಕೋಚ್‌ಗೆ ಸ್ಥಳಾಂತರಿಸಲಾಯಿತು ಎಂದು ರೈಲ್ವೆ ಅಧಿಕಾರಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!