Monday, October 3, 2022

Latest Posts

ಜಿಂಬಾಬ್ವೆ ವಿರುದ್ಧ ಸರಣಿ ಗೆದ್ದ ಖುಷಿಗೆ ಭರ್ಜರಿ ಸ್ಟೆಪ್‌ ಹಾಕಿದ ಟೀಂ ಇಂಡಿಯಾ ಆಟಗಾರರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಜಿಂಬಾಬ್ವೆ ವಿರುದ್ಧ‌ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಕ್ಲೀನ್ ಸ್ವೀಪ್ ಮಾಡಿದ ಭಾರತದ ಆಟಗಾರರು ‘ಕಾಲಾ ಚಶ್ಮಾ’ ಹಾಡಿಗೆ ಭರ್ಜರಿಯಾಗಿ ಕುಣಿದು ಗೆಲುವಿನ ಸಂಭ್ರಮಾಚರಣೆ ಮಾಡಿದ್ದಾರೆ.
ಪಂದ್ಯ ಮುಗಿದ ನಂತರ ಶಿಖರ್ ಧವನ್ ಈ ವಿಡಿಯೋವನ್ನು Instagram ನಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್‌ ಆಗುತ್ತಿದೆ.
ನಾಯಕ ರಾಹುಲ್‌ ಚಾಲನೆ ನೀಡಿದ ವಿಡಿಯೋದಲ್ಲಿ ಶಿಖರ್‌ ಧವನ್‌, ಇಶಾನ್ ಕಿಶನ್, ಶುಭ್‌ಮಾನ್ ಗಿಲ್‌ ಸೇರಿದಂತೆ ಆಟಗಾರರು ಭರ್ಜರಿ ಸ್ಟೆಪ್‌ ಹಾಕಿದ್ದನಬ್ನು ಕಾಣಬಹುದು.
ಗೆಲುವಿನ ನಂತರ ಟೀಮ್ ಇಂಡಿಯಾದ ಸಂಭ್ರಮಾಚರಣೆಯ ವಿಡಿಯೋ 
ಕ್ಲಿಕ್‌ ಮಾಡಿ:
ಜಿಂಬಾಬ್ವೆ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ 13 ರನ್‌ಗಳ ಜಯ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಮೂರನೇ ಕ್ರಮಾಂಕದ ಆಟಗಾರ ಗಿಲ್ ತನ್ನ ಚೊಚ್ಚಲ ಅಂತರಾಷ್ಟ್ರೀಯ ಶತಕ (97 ಎಸೆತಗಳಲ್ಲಿ 130)ದ ಬಲದೊಂದಿಗೆ 289 ರನ್‌ ಗಳ ಉತ್ತಮ ಮೊತ್ತವನ್ನು ದಾಖಲಿಸಿತು.
ಈ ಮೊತ್ತವನ್ನು ಬೆನ್ನಟ್ಟಿದ ಜಿಂಬಾಬ್ವೆ ಭಾರತಕ್ಕೆ ಕಠಿಣ ಹೋರಾಟ ನೀಡಿತು. ಸಿಕಂದರ್ ರಜಾ ಅವರು 95 ಎಸೆತಗಳಲ್ಲಿ 115 ರನ್ ಗಳಿಸುವ ಮೂಲಕ ಜಿಂಬಾಬ್ವೆಯನ್ನು ಗೆಲುವಿನ ಸನಿಹ ಕೊಂಡೊಯ್ದಿದ್ದರು. ಆದಾಗ್ಯೂ, ತಂಡ 49.3 ರಲ್ಲಿ 276 ಕ್ಕೆ ಸರ್ವಪತನವಾಗಿ ಸೋಲು ಕಂಡಿತು. ಈ ಮೂಲಕ ಭಾರತ ಸರಣಿ ಕ್ಲೀನ್‌ ಸ್ವೀಪ್‌ ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!