ನಾಗ್ಪುರ ಸ್ಫೋಟಕ ತಯಾರಿಕಾ ಘಟಕ ದುರಂತ: ಮೃತರ ಗುರುತು ಪತ್ತೆಗೆ DNA ಪರೀಕ್ಷೆಗೆ ತೀರ್ಮಾನ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದ ನಾಗ್ಪುರದಲ್ಲಿ ಸ್ಫೋಟಕಗಳ ಉತ್ಪಾದನಾ ಘಟಕದಲ್ಲಿ ಭಾನುವಾರ ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಗುರುತು ಪತ್ತೆಗೆ ಡಿಎನ್‌ಎ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.

ಭಾನುವಾರ ಸಂಭವಿಸಿದ್ದ ಸ್ಫೋಟದಲ್ಲಿ 9 ಜನರು ಮೃತಪಟ್ಟಿದ್ದರು. ತನಿಖಾ ತಂಡಗಳು ಸ್ಥಳದಿಂದ ದೇಹದ ವಿವಿಧ ಭಾಗಗಳನ್ನು ಸಂಗ್ರಹಿಸಿವೆ. ಇವುಗಳನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಾಗ್ಪುರದ ಚಾಕ್‌ಡೋಹ್‌ನಲ್ಲಿರುವ ಸೋಲಾರ್‌ ಇಂಡಸ್ಟ್ರೀಸ್‌ ಇಂಡಿಯಾ ಘಟಕದಲ್ಲಿ ಈ ಅವಘಡ ಸಂಭವಿಸಿತ್ತು. ಸ್ಥಳದಲ್ಲಿ ಸಂಗ್ರಹಿಸಿದ ದೇಹದ ವಿವಿಧ ಭಾಗಗಳನ್ನು ಭಿನ್ನ ಪ್ಯಾಕೆಟ್‌ಗಳಲ್ಲಿ ಇಡಲಾಗಿದೆ. ಮಾದರಿ ಆಧರಿಸಿ ಡಿಎನ್‌ಎ ಪರೀಕ್ಷೆ ಬಳಿಕ ಗುರುತು ಪತ್ತೆ ಮಾಡಿ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ತನಿಖಾ ತಂಡಗಳು ಸ್ಥಳದಿಂದ ಇದುವರೆಗೂ 50 ಅಂಗಗಳನ್ನು ವಶಕ್ಕೆ ಪಡೆದುಕೊಂಡಿವೆ. ಸಾವಿಗೆ ಕಾರಣವಾದ ನಿರ್ಲಕ್ಷ್ಯ (ಐಪಿಸಿ 304ಎ), ನಿರ್ಲಕ್ಷ್ಯ (286) ಕುರಿತು ಪ್ರಕರಣ ದಾಖಲಿಸಲಾಗಿದೆ. ತನಿಖೆ ಹಂತದಲ್ಲಿಯೇ ಆರೋಪಿಗಳನ್ನು ಗುರುತಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!