May 14, 2026
Thursday, May 14, 2026
spot_img

ಇಂಧನ ಉಳಿತಾಯಕ್ಕೆ ಕೈ ಜೋಡಿಸಿದ ನಾಯ್ಡು ಸರ್ಕಾರ: ವರ್ಕ್ ಫ್ರಮ್ ಹೋಂ, ಬೆಂಗಾವಲು ವಾಹನ ಸಂಖ್ಯೆ ಕಡಿತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ–ಇರಾನ್ ಉದ್ವಿಗ್ನತೆಯಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಹೆಚ್ಚುತ್ತಿರುವ ನಡುವೆ, ಇಂಧನ ಉಳಿತಾಯಕ್ಕಾಗಿ ಆಂಧ್ರ ಪ್ರದೇಶ ಸರ್ಕಾರ ಮಹತ್ವದ ಕ್ರಮಗಳನ್ನು ಘೋಷಿಸಿದೆ.

ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆ ಬಳಿಕ ರಾಜ್ಯ ಸಚಿವ ಸಂಪುಟ ಹಲವು ಹೊಸ ನಿಯಮಗಳಿಗೆ ಒಪ್ಪಿಗೆ ಸೂಚಿಸಿದೆ.

ಅಮರಾವತಿಯಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಮಾಹಿತಿ ಸಚಿವ ಕೆ. ಪಾರ್ಥಸಾರಥಿ ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ಅಗತ್ಯವಿದ್ದಲ್ಲಿ ವರ್ಕ್ ಫ್ರಮ್ ಹೋಂ ಜಾರಿಗೆ ತರಲು ಹಾಗೂ ವಾರದಲ್ಲಿ ಒಂದು ದಿನ ವಾಹನ ರಹಿತ ದಿನ ಆಚರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಸಾರ್ವಜನಿಕ ಸಾರಿಗೆ ಬಳಕೆ, ಆನ್‌ಲೈನ್ ಸಭೆಗಳು ಮತ್ತು ವರ್ಚುವಲ್ ತರಗತಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

ಇದನ್ನೂ ಓದಿ:

ಇದೇ ವೇಳೆ ಅಧಿಕಾರಿಗಳ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡುವುದು, ವಿಶೇಷ ವಿಮಾನ ಬಳಕೆಗೆ ಮಿತಿ ವಿಧಿಸುವುದು ಮತ್ತು ಅನಗತ್ಯ ವಿದೇಶ ಪ್ರವಾಸಗಳನ್ನು ತಗ್ಗಿಸುವಂತಹ ಕ್ರಮಗಳನ್ನೂ ಸರ್ಕಾರ ಶಿಫಾರಸು ಮಾಡಿದೆ. ಚಿನ್ನ ಖರೀದಿಯನ್ನು ಮುಂದೂಡುವಂತೆ ಸಹ ಜನರಿಗೆ ಮನವಿ ಮಾಡಲಾಗಿದೆ.

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು “ನನ್ನ ದೇಶ, ನನ್ನ ಜವಾಬ್ದಾರಿ” ಎಂಬ ಸಂದೇಶದಡಿ ಜನರು ಇಂಧನ ಉಳಿತಾಯಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದ್ದಾರೆ. ದೇಶದ ವಿದೇಶಿ ವಿನಿಮಯ ಸಂಗ್ರಹ ಹಾಗೂ ಇಂಧನ ಭದ್ರತೆ ಕಾಪಾಡಲು ಪ್ರತಿಯೊಬ್ಬ ನಾಗರಿಕನ ಸಹಕಾರ ಅಗತ್ಯ ಎಂದು ಸರ್ಕಾರ ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !