September 23, 2026
Wednesday, September 23, 2026
spot_img

ಆರೈಕೆಗೆ ಬಂದಾಕೆಯಿಂದ ಬಾಣಂತಿ ಮಹಿಳೆಯ ನಗ್ನ ದೃಶ್ಯ ಚಿತ್ರೀಕರಣ: ಕರ್ನಾಟಕದ ಯುವತಿ ಕಾಸರಗೋಡಿನಲ್ಲಿ ಸೆರೆ

ಹೊಸದಿಗಂತ ವರದಿ ಕಾಸರಗೋಡು:

ಆರೈಕೆಯ ನೆಪದಲ್ಲಿ ಮಹಿಳೆಯೊಬ್ಬರ ನಗ್ನ ದೃಶ್ಯಗಳನ್ನು ಸೆರೆಹಿಡಿದು, ಬಳಿಕ ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದ ಆರೋಪದ ಮೇಲೆ ಕರ್ನಾಟಕ ಮೂಲದ ನಿವಾಸಿ 25 ವರ್ಷದ ಯುವತಿಯನ್ನು ಕಾಸರಗೋಡು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತಳನ್ನು ಕರ್ನಾಟಕ ನಿವಾಸಿ ಸುಲೈಖಾ ರಾಶಿಯಾ ಎಂದು ಗುರುತಿಸಲಾಗಿದೆ. ಕಾಸರಗೋಡು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿರುವ 27 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:

ದೂರುದಾರ ಮಹಿಳೆಯ ಆರೈಕೆಗಾಗಿ ಸುಲೈಖಾ ರಾಶಿಯಾ ಆಗಮಿಸಿದ್ದಳು. ಈ ಸಂದರ್ಭ ಸೆ.7ರಿಂದ 20ರ ನಡುವಿನ ಅವಧಿಯಲ್ಲಿ ಆಕೆಯ ಆರೈಕೆಯ ನೆಪದಲ್ಲಿ ಮಹಿಳೆಯ ನಗ್ನ ದೃಶ್ಯಗಳನ್ನು ಸೆರೆಹಿಡಿದಿದ್ದಾಳೆ ಎಂದು ಆರೋಪಿಸಲಾಗಿದೆ. ಬಳಿಕ ಆ ದೃಶ್ಯಗಳನ್ನು ಆರೋಪಿ ಮಹಿಳೆ ಹಲವರಿಗೆ ವಾಟ್ಸ್ಆ್ಯಪ್ ಮೂಲಕ ಕಳುಹಿಸಿದ್ದಾಳೆ ಎಂದು ದೂರಲಾಗಿದೆ.

ಇದಲ್ಲದೆ, ಆರೋಪಿಯು ಪತಿಯೊಂದಿಗೆ ಸೇರಿಕೊಂಡು ಬ್ಲ್ಯಾಕ್‌ಮೇಲ್ ನಡೆಸಲು ಸಂಚು ರೂಪಿಸಿದ್ದಾಳೆ ಎಂಬ ಶಂಕೆಯೂ ಪೊಲೀಸರಿಗೆ ವ್ಯಕ್ತವಾಗಿದೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ. ಪ್ರಕರಣದ ಸಂಪೂರ್ಣ ಹಿನ್ನೆಲೆ ಹಾಗೂ ದೃಶ್ಯಗಳನ್ನು ಯಾರ್ಯಾರಿಗೆ ಕಳುಹಿಸಲಾಗಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದ್ದು, ಘಟನೆಯ ವಿವಿಧ ಆಯಾಮಗಳನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !