ನಲಪಾಡ್ ಯಾರ ಮೇಲೆ ಹಲ್ಲೆ ಮಾಡಿಲ್ಲ: ಡಿಕೆ ಶಿವಕುಮಾರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಳ್ಳಾರಿ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಹಳ್ಳೇಗೌಡ ಮೇಲೆ ಮೊಹಮ್ಮದ್ ನಲಪಾಡ್ ಹಲ್ಲೆ ನಡೆಸಿದ್ದಾನೆ ಎಂಬ ಆರೋಪಕ್ಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಯಾವುದೇ ಗಲಾಟೆ ಇಲ್ಲ, ಏನು ಇಲ್ಲ. ನಾನು ಕ್ರಾಸ್ ಚೆಕ್ ಮಾಡಿದೆ. ಆ ಥರ ಏನೂ ಇಲ್ಲ. ಯಾರೋ ಮಿಸ್ ಗೈಡ್ ಮಾಡಿದ್ದಾರೆ ಎಂದು ಹೇಳಿದ್ದಾರೆ.
ನಾನು ಸಿದ್ದು ಹಳ್ಳೇಗೌಡ ಜೊತೆ ಪೋನಲ್ಲಿ ಮಾತನಾಡಿದೆ . ನನ್ನ ಪೋನ್ ತಗೊಂಡು ಯಾರೋ ಈ ರೀತಿ ಮಾಡಿದ್ದಾರೆ ಅಂತ ಅವರು ಹೇಳಿದ್ದಾರೆ ಎಂದು ಶಿವಕುಮಾರ್ ಸ್ಪಷ್ಟನೆ ನೀಡಿದರು.
ಕೆಲಸ ಮಾಡುತ್ತಾ ಇದ್ದಾರೆ ಅವರ ವಿರುದ್ಧ ಈ ರೀತಿ ಏನೋ ಒಂದು ಆರೋಪ ಕೇಳಿ ಬರುತ್ತಲೇ ಇರುವುದು ಸಹಜ. ನಾನು ಯಾರ ವೈಯಕ್ತಿಕ ಜೀವನದ ಒಳಗೂ ಪ್ರವೇಶ ಮಾಡುವುದಕ್ಕೆ ಇಷ್ಟಪಡುವುದಿಲ್ಲ. ಯಾರೇ ಪಕ್ಷದಲ್ಲಿ ತಪ್ಪು ಮಾಡಿದರೆ ಶಿಸ್ತಿನ ಕ್ರಮ ತೆಗೆದುಕೊಳ್ಳುತ್ತೀನಿ ಎಂದು ನಲಪಾಡ್ ಪರ ಡಿ.ಕೆ. ಶಿವಕುಮಾರ್​ ಬ್ಯಾಟ್​ ಬೀಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!