ಹೊಸದಿಗಂತ ವರದಿ ಜೊಯಿಡಾ:
ತಾಲೂಕಿನ ಗಾಂಗೋಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಾಪೋಲಿ (ಕೆ) ಹಿರಿಯ ಪ್ರಾಥಮಿಕ ಶಾಲೆ ಗೋಡೆ ಕುಸಿದಿದೆ. ರಾತ್ರಿ ಗೋಡೆ ಕುಸಿದಿದೆ ಕಾರಣ ಅಪಾಯ ತಪ್ಪಿದೆ.
ಇದು ನಲಿಕಲಿ ಕೋಣೆಯಾಗಿದೆ. 20 ವಿದ್ಯಾರ್ಥಿಗಳು ಈ ಕೊಠಡಿಯಲ್ಲಿ ಕಲಿಯುತ್ತಿದ್ದರು.1 ರಿಂದ 2 ನೇ ತರಗತಿಯ ತನಕ 51 ವಿದ್ಯಾರ್ಥಿಗಳು ಶಾಲೆಯಲ್ಲಿ ಇದ್ದಾರೆ.
ಶಾಲೆಗೆ ಇರುವ ಮೂರು ಕೊಠಡಿ ದುರವಸ್ಥೆಯಲ್ಲಿ ಇದೆ. ಇರುವ ಒಂದು ರೂಮು ಕುಸಿದಿದೆ. ಮಕ್ಕಳಿಗೆ ಕುಳಿತು ಕೊಳ್ಳಲು ಜಾಗೆ ಇಲ್ಲ. ಶಾಲಾ ದಾಖಲೆಗಳು ನೀರಿನಿಂದ ಹಾಳಾಗುತ್ತಿದೆ.
ಶಿಕ್ಷಣ ಇಲಾಖೆ ಮೌನವಾದಂತಾಗಿದೆ. ಕಳೆದ ಐದು ವರ್ಷಗಳಿಂದ ರಿಪೇರಿ ಮಾಡಿ ಎಂದು ಕೇಳಿದರೂ ಯಾರು ಗಮನ ಹರಿಸಿಲ್ಲ. ಒಂದು ಕೊಠಡಿಯು ರಿಪೇರಿ ಇಲ್ಲ. ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದು ಸತ್ಯ.