Friday, February 3, 2023

Latest Posts

ಪ್ರಧಾನಿ ತಾಯಿ ಹೀರಾಬೆನ್ ಅವರ ನಿಧನಕ್ಕೆ ನಳಿನ್‍ಕುಮಾರ್ ಕಟೀಲ್ ಸಂತಾಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಯಿ ಶ್ರೀಮತಿ ಹೀರಾಬೆನ್ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದರೂ ಆದ ನಳಿನ್‍ಕುಮಾರ್ ಕಟೀಲ್ ಅವರು ತೀವ್ರ ಸಂತಾಪ ಸೂಚಿಸಿದ್ದು, ಮೃತರ ಆತ್ಮಕ್ಕೆ ಸದ್ಗತಿ ಕೋರಿದ್ದಾರೆ.

ಇದು ದೇಶಕ್ಕೇ ಆಘಾತ ತಂದ ಸುದ್ದಿ. ಹೀರಾಬೆನ್ ಅವರು ನರೇಂದ್ರ ಮೋದಿಯವರ ರೂಪದಲ್ಲಿ ಭಾರತಕ್ಕೆ ಸಮರ್ಥ ಪ್ರಧಾನಿಯನ್ನು ನೀಡಿದ್ದಾರೆ. ಜಗತ್ತಿಗೇ ಒಬ್ಬ ಮಾರ್ಗದರ್ಶಕರನ್ನು ಕೊಟ್ಟಿದ್ದಾರೆ. ಒಬ್ಬ ತಪಸ್ವಿಯಂತೆ, ನಿಷ್ಕಾಮ ಕರ್ಮಯೋಗಿಯಾಗಿ ಮತ್ತು ಮೌಲ್ಯಗಳಿಗೆ ಬದ್ಧತೆಯಿಂದ ಹೀರಾಬೆನ್ ಅವರು ಬದುಕಿದ್ದರು ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!