National girl child day | ಮಗಳ ಉಜ್ವಲ ಭವಿಷ್ಯಕ್ಕಾಗಿ ಸರ್ಕಾರ ನೀಡಿರುವ ಬೆಸ್ಟ್ ಯೋಜನೆಗಳಿವು..

ಮಗಳು ತುಂಬಾ ಜಾಣೆ, ಶಾಲೆಯಲ್ಲಿ ಫಸ್ಟ್ ಆಕೆಗೆ ಡಾಕ್ಟರ್ ಆಗುವ ಆಸೆ ಆದರೆ ದುಡ್ಡಿಲ್ಲ!

ಮಗಳಿಗೆ ಬ್ಯುಸಿನೆಸ್ ಮೇಲೆ ಆಸಕ್ತಿ, ಆಕೆಗೊಂದು ಬ್ಯೂಟಿ ಪಾರ್ಲರ್ ಮಾಡಿಕೊಡಬೇಕು ಆದ್ರೆ ದುಡ್ಡಿಲ್ಲ!

ಮಗಳಿಗೆ ಡಬಲ್ ಡಿಗ್ರಿ ಮಾಡಿಸಿದ್ದೇವೆ, ಇನ್ನಷ್ಟು ಓದಬೇಕು, ಫಾರಿನ್‌ನಲ್ಲಿ ಓದಿ ವಾಪಾಸಾಗಬೇಕು ಎನ್ನುವ ಬಯಕೆ ಅವಳದ್ದು ಆದರೆ ನಮ್ಮ ಬಳಿ ದುಡ್ಡಿಲ್ಲ!

ಒಂದಲ್ಲಾ ಎರಡಲ್ಲ ಎಷ್ಟೋ ಮನೆಗಳ ಸಾಮಾನ್ಯ ಕಥೆಯಿದು, ಆರ್ಥಿಕವಾಗಿ ಸಬಲರಲ್ಲದ ಕಾರಣದಿಂದ ಮಕ್ಕಳ ಆಸೆಗಳಿಗೆ ಎಂದೋ ಒಂದು ದಿನ ಬ್ರೇಕ್ ಹಾಕಬೇಕಾಗುತ್ತದೆ. ಆದರೆ ಕೇಂದ್ರ ಸರ್ಕಾರ ಹೆಣ್ಣುಮಕ್ಕಳಿಗಾಗಿ ಎಷ್ಟೆಲ್ಲಾ ಉಪಯುಕ್ತವಾದಂಥ ಯೋಜನೆಗಳನ್ನು ನೀಡಿದೆ. ಹೆಣ್ಣು ಮಗು ಹುಟ್ಟಿದ ದಿನದಿಂದಲೇ ಆಕೆಯ ಭವಿಷ್ಯಕ್ಕಾಗಿ ಈ ಸ್ಕೀಮ್‌ಗಳ ಬಗ್ಗೆ ತಿಳಿದುಕೊಳ್ಳಿ..

Is Rural India becoming serious about Girl Child Education?ಸುಕನ್ಯ ಸಮೃದ್ಧಿ ಯೋಜನೆ

ಈ ಬಗ್ಗೆ ನಿಮಗೆ ತಿಳಿದಿರುಬಹುದು, ಹೆಣ್ಣು ಮಗುವಿಗೆ 10 ವರ್ಷ ತುಂಬುವ ಮುನ್ನ ಪೋಸ್ಟ್ ಆಫೀಸ್‌ಗೆ ತೆರಳಿ ಮಗಳ ಹೆಸರಿಗೆ ಖಾತೆ ತೆರೆಯಿರಿ. ತಿಂಗಳಿಗೆ ಕನಿಷ್ಠ 250 ರೂಪಾಯಿ ಹಾಗೂ ಗರಿಷ್ಠ 12,500 ರೂಪಾಯಿ ಅದಕ್ಕೆ ಹಾಕಿ. ಮಗಳಿಗೆ 21 ವರ್ಷ ತುಂಬಿದ ನಂತರ ಈ ಹಣ ಪಡೆಯಬಹುದು. ಇದಕ್ಕೆ ಬಡ್ಡಿದರವನ್ನು ಹಾಕಿ ತ್ರೈಮಾಸಿಕವಾಗಿ ಸರ್ಕಾರ ನಿಮಗೆ ನೀಡುತ್ತದೆ. 18 ವಯಸ್ಸಿಗೆ ಆಕೆಯ ಮದುವೆ ಮಾಡಲು ನಿರ್ಧರಿಸಿದರೆ ಆ ಸಮಯದಲ್ಲಿಯೂ ನಿಮ್ಮ ಹಣ ನೀವು ಪಡೆಯಬಹುದು. ಉದಾಹರಣೆಗೆ ಒಂದು ವರ್ಷಕ್ಕೆ ನೀವು ಒಂದೂವರೆ ಲಕ್ಷ ಕಟ್ಟಿದರೆ ಆಕೆಗೆ 21 ವರ್ಷ ಆದಾಗ ನೀವು 69 ಲಕ್ಷ ರೂಪಾಯಿ ಪಡೆಯಬಹುದು.

10 NGOs working for girl child education in India - Give's Blogರಾಷ್ಟ್ರೀಯ ಪ್ರೋತ್ಸಾಹಕ ಯೋಜನೆ

2008ರಲ್ಲಿ 9ನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು 3,000 ರೂಪಾಯಿ ಠೇವಣಿ ಇಡಲಾಗುತ್ತದೆ. ಅವರು 18 ವರ್ಷ ತಲುಪಿ, 10ನೇ ತರಗತಿಯಲ್ಲಿ ಉತ್ತೀರ್ಣರಾದರೆ ಬಡ್ಡಿಯೊಂದಿಗೆ ಮೊತ್ತ ವಾಪಾಸ್ ಮಾಡಲಾಗುತ್ತದೆ.

National girl child day 2024 wishes and quotes in English national girl  child day quotes quotes on girl child empowerment proud to be a girl child  quotes - India Todayಬೇಟಿ ಬಚಾವೋ ಬೇಟಿ ಪಡಾವೋ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2015ರ ಜನವರಿ 22ರಂದು ಈ ಯೋಜನೆಯನ್ನು ಪ್ರಾರಂಭಿಸಿದರು. ಇದು ಮಕ್ಕಳ ಲಿಂಗ ಅನುಪಾತ ಮತ್ತು ಜೀವನ ಚಕ್ರ ನಿರಂತರತೆಯ ಮೇಲೆ ಮಹಿಳಾ ಸಬಲೀಕರಣದ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುತ್ತದೆ.

What is stopping the Indian girl child from going to school?- Edexliveಬಾಲಿಕಾ ಸಮೃದ್ಧಿ ಯೋಜನೆ:

ಈ ವಿದ್ಯಾರ್ಥಿವೇತನ ಯೋಜನೆಯು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿನ ಹೆಣ್ಣು ಮಕ್ಕಳಿಗೆ ಆರ್ಥಿಕ ನೆರವು ನೀಡುತ್ತದೆ. ಈ ಯೋಜನೆಯಡಿ, ಮಗಳು ಹುಟ್ಟಿದ ನಂತರ 500 ರೂ. ನೀಡಲಾಗುತ್ತದೆ. ಪ್ರತಿ ವರ್ಷ ಅವಳ ಅಧ್ಯಯನಕ್ಕಾಗಿ ವಿದ್ಯಾರ್ಥಿವೇತನವನ್ನು ಕೂಡ ನೀಡಲಾಗುತ್ತದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!