ಪಿಂಕ್ ಲೈನ್‌ಗಾಗಿ 1 ಎಕರೆ ಖಾಸಗಿ ಭೂಮಿ ಸ್ವಾಧೀನಕ್ಕೆ ತೀರ್ಮಾನಿಸಿದ ನಮ್ಮ ಮೆಟ್ರೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಹಂತ 2 ರ ಅಡಿಯಲ್ಲಿ ರಿಸೀವಿಂಗ್ ಸಬ್ ಸ್ಟೇಷನ್ ನಿರ್ಮಿಸಲು ನಾಗವಾರದಲ್ಲಿ ನಮ್ಮ ಮೆಟ್ರೋ ಇನ್ನೂ 45,000 ಚದರ ಅಡಿ(1 ಎಕರೆ) ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ.
ಈ ಕುರಿತು ಪ್ರಾಥಮಿಕ ಅಧಿಸೂಚನೆಯನ್ನು ಇತ್ತೀಚೆಗೆ ಸರ್ಕಾರಿ ಗೆಜೆಟ್‌ನಲ್ಲಿ ಹೊರಡಿಸಲಾಗಿದೆ. ನಮ್ಮ ಮೆಟ್ರೋ ಪರವಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಿರುವ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಈ ಬಗ್ಗೆ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.
ಕೆಐಎಡಿಬಿಯು ಕಸಬಾ ಹೋಬಳಿಯ ನಾಗವಾರ ಗ್ರಾಮದಲ್ಲಿ 4,182.63 ಚದರ ಮೀಟರ್ (45,021.45 ಚದರ ಅಡಿ) ಅಳತೆಯ ಮೂರು ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲಿದೆ.
ಈ ಆಸ್ತಿಗಳಲ್ಲಿ ಒಂದು ಖಾಸಗಿ ರಿಯಲ್ ಎಸ್ಟೇಟ್ ಸಂಸ್ಥೆಯ ಒಡೆತನದಲ್ಲಿದೆ ಮತ್ತೊಂದು ಖಾಸಗಿ ವ್ಯಕ್ತಿಗೆ ಸೇರಿದೆ. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಜನವರಿ 17, 2023 ರಂದು ವಿಚಾರಣೆ ನಡೆಯಲಿದೆ.
ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಮಾತನಾಡಿ, 2ನೇ ಹಂತದ ಭೂಸ್ವಾಧೀನ ಬಹುತೇಕ ಪೂರ್ಣಗೊಂಡಿದ್ದು, ಕೆಲವು ಹೊಸ ಅವಶ್ಯಕತೆಗಳಿಗನುಗುಣವಾಗಿ ಭೂ ಸ್ವಾಧೀನಕ್ಕೆ ಮುಂದಾಗಿದ್ದೇವೆ ಎಂದಿದ್ದಾರೆ.  2024 ರಲ್ಲಿ ಪಿಂಕ್ ಲೈನ್ ತೆರೆಯುವ ನಿರೀಕ್ಷೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!