Tuesday, May 30, 2023

Latest Posts

ಮೋದಿ ಜೊತೆಗಿನ ಫೋಟೋ ಮಿಸ್ ಆಗಿದ್ಯಾ? Namo ಅಪ್ಲಿಕೇಶನ್‌ನಲ್ಲಿ ಈಗ ಲಭ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ತೆಗೆಸಿಕೊಂಡ ಫೋಟೋವನ್ನು ನೀವು ಮಿಸ್ ಮಾಡಿಕೊಂಡಿದ್ದೀರಾ? ಅದನ್ನು ಮರಳಿ ಪಡೆಯುವುದು ಹೇಗೆ ಎಂದು ಗೊತ್ತಾಗ್ತಿಲ್ವಾ? ಆದರೆ ಈಗ ಆ ಫೋಟೋವನ್ನು ಟ್ರೇಸ್ ಮಾಡುವುದು ತುಂಬಾ ಸುಲಭ. ನಮೋ ಅಪ್ಲಿಕೇಶನ್ ಈಗ “ಫೋಟೋ ಬೂತ್” ಎಂಬ ಹೊಸ ವೈಶಿಷ್ಟ್ಯದೊಂದಿಗೆ ಬರುತ್ತದೆ. ಎಐ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಪ್ರಕ್ರಿಯೆಯ ಮೂಲಕ, ಇದು 30 ದಿನಗಳ ಹಿಂದೆ ತೆಗೆದ ಹಳೆಯ ಫೋಟೋಗಳನ್ನು ಸಹ ಗುರುತಿಸಿ ನಿಮಗೆ ಲಭ್ಯವಾಗುವಂತೆ ಮಾಡುತ್ತದೆ.

ಪ್ರಧಾನಿಯೊಂದಿಗೆ ತೆಗೆಸಿಕೊಂಡಿರುವ ನಿಮ್ಮ ಫೋಟೋ ಗ್ಯಾಲರಿಗಳಿಂದ ತಪ್ಪಿ ಹೋಗಿರಬಹುದು. ನಮೋ ಆಪ್ ಹೊಸ ಫೀಚರ್ ಅನ್ನು ಅಭಿವೃದ್ಧಿಪಡಿಸುತ್ತಿದ್ದು, ಅದನ್ನು ಮರಳಿ ಪಡೆಯಲು ಸಾಧ್ಯವಾಗದವರು ನಿರಾಶರಾಗುವ ಅಗತ್ಯವಿಲ್ಲ. ಫೋಟೋವನ್ನು ಟ್ರೇಸ್ ಮಾಡಬೇಕೆಂದರೆ ಮುಖವನ್ನು ಸ್ಕ್ಯಾನ್ ಮಾಡಿ ಸರ್ಚ್ ಬಟನ್ ಕ್ಲಿಕ್ ಮಾಡಿದಷ್ಟೇ ಸುಲಭ. ಈ ವಿಧಾನದಿಂದ ಫೋಟೋಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು.

ಪ್ರಧಾನಿ ಮೋದಿ ಯಾವುದೇ ಕಾರ್ಯಕ್ರಮ ಕೈಗೊಂಡರೂ ಆ ಕಾರ್ಯಕ್ರಮಕ್ಕೆ ಹಲವು ಸಚಿವರು, ಜನಪ್ರತಿನಿಧಿಗಳು ಆಗಮಿಸುತ್ತಾರೆ. ಆದರೆ ಆ ಸಂದರ್ಭದಲ್ಲಿ ತೆಗೆದ ಫೋಟೋಗಳು ಎಲ್ಲರಿಗೂ ಸಿಗದೇ ಇರಬಹುದು. ಆ ನಂತರ ಪ್ರಯತ್ನಿಸಿದರೂ ಸಿಗದೇ ಇರಬಹುದು. ಆದರೆ ನಮೋ ಆಪ್‌ನಲ್ಲಿರುವ AI (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಎಂಬ ವೈಶಿಷ್ಟ್ಯದ ಮೂಲಕ, ಆ ಕಾರ್ಯಕ್ರಮದ ಫೋಟೋಗಳನ್ನು ಹಿಂಪಡೆಯಬಹುದು. ಪ್ರಸ್ತುತ 30 ದಿನಗಳ ಹಿಂದಿನ ಫೋಟೋಗಳನ್ನು ಮಾತ್ರ AI (ಕೃತಕ ಬುದ್ಧಿಮತ್ತೆ) ಪ್ರಕ್ರಿಯೆಯ ಮೂಲಕ ಪತ್ತೆಹಚ್ಚಬಹುದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!