ಇಂದು ಕೇರಳಕ್ಕೆ ‘ನಮೋ’ ಭೇಟಿ: ಬೃಹತ್ ರೋಡ್‌ಶೋ ನಡೆಸುವ ಸಾಧ್ಯತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕೇರಳದ ಪಟ್ಟನಂತಿಟ್ಟಗೆ ಭೇಟಿ ನೀಡಲಿದ್ದಾರೆ. ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ, ಹಾಗೆಯೆ ಬೃಹತ್ ರೋಡ್‌ಶೋ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ರಾಜ್ಯ ಬಿಜೆಪಿ ಮುಖ್ಯಸ್ಥ ಕೆ ಸುರೇಂದ್ರನ್, ಪಕ್ಷದ ಕೇರಳ ಉಸ್ತುವಾರಿ ಪ್ರಕಾಶ್ ಜಾವಡೇಕರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಜಾರ್ಜ್ ಕುರಿಯನ್ ಮತ್ತು ಪತ್ತನಂತಿಟ್ಟ ಜಿಲ್ಲಾಧ್ಯಕ್ಷ ವಿಎ ಸೂರಜ್ ಅವರು ಪ್ರಧಾನಿಯನ್ನು ಬರಮಾಡಿಕೊಳ್ಳಲಿದ್ದಾರೆ. ಎನ್‌ಡಿಎ ಲೋಕಸಭಾ ಅಭ್ಯರ್ಥಿಗಳಾದ ವಿ ಮುರಳೀಧರನ್, ಅನಿಲ್ ಕೆ ಆಂಟನಿ, ಶೋಭಾ ಸುರೇಂದ್ರನ್, ಮತ್ತು ಬೈಜು ಕಲಾಸಾಲ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೇರಳ ಪೊಲೀಸ್ ಕಾಯಿದೆಯ ಸೆಕ್ಷನ್ 39 ರ ಪ್ರಕಾರ, ಪಟ್ಟನಂತಿಟ್ಟ ಮುನ್ಸಿಪಲ್ ಸ್ಟೇಡಿಯಂ ಮತ್ತು ಪ್ರಮದಮ್ ಒಳಾಂಗಣ ಕ್ರೀಡಾಂಗಣದ 3 ಕಿಮೀ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟವನ್ನು ನಿಷೇಧಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!