ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಹಾಗೂ ಸಿತಾರಾ ವಿದೇಶದಲ್ಲಿ ಸುತ್ತಾಟ ನಡೆಸಿದ್ದಾರೆ.
ಆಗಾಗ ವಿದೇಶಕ್ಕೆ ತೆರಳಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಸಿತಾರಾಗೆ ಇನ್ಸ್ಟಾಗ್ರಾಮ್ನಲ್ಲಿ ಮಿಲಿಯನ್ಗಿಂತ ಹೆಚ್ಚು ಫಾಲೋವರ್ಸ್ ಇದ್ದಾರೆ.
ಇದೀಗ ಪ್ಯಾರಿಸ್ನಲ್ಲಿ ಸುತ್ತಾಟ ನಡೆಸಿದ್ದು, ಗರ್ಲ್ಸ್ ಗ್ಯಾಂಗ್ ಮಾತ್ರ ಪ್ಯಾರಿಸ್ಗೆ ಹೋಗಿದೆ. ಆದರೆ ಫ್ಯಾಮಿಲಿ ಟ್ರಿಪ್ನಲ್ಲಿ ಮಹೇಶ್ ಬಾಬು ಯಾಕಿಲ್ಲ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಸರ್ಕಾರ ವಾರಿ ಪಾಟ ಗೆಲುವಿನ ನಂತರ ಇದೀಗ ಹೊಸ ಸಿನಿಮಾವೊಂದಕ್ಕೆ ಮಹೇಶ್ ಬಾಬು ಸಹಿ ಹಾಕಿದ್ದಾರೆ. ಹಾಗಾಗಿ ಶೂಟ್ನಲ್ಲಿ ಬ್ಯುಸಿ ಇರೋ ಕಾರಣ ಅವರು ಟ್ರಿಪ್ಗೆ ತೆರಳಿಲ್ಲ ಎನ್ನಲಾಗಿದೆ.