Friday, June 9, 2023

Latest Posts

2022ರ ಸಂಪೂರ್ಣ ದಾಖಲೆ ಮೀರಿಸಿದೆ ಈ ವರ್ಷದ ಮೂರೇ ತಿಂಗಳಲ್ಲಿ ನಡೆದ ಉದ್ಯೋಗ ಕಡಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆರ್ಥಿಕ ಅನಿಶ್ಚಿತತೆಗಳಿಂದ ಜಾಗತಿಕ ಉದ್ಯೋಗ ಕಡಿತದ ಪರ್ವ ಮುಂದುವರೆದಿದ್ದು ಇತ್ತೀಚಿನ ಅಂಕಿ ಅಂಶಗಳ ಪ್ರಕಾರ 2023ರ ಮೊದಲ ಮೂರು ತಿಂಗಳುಗಳಲ್ಲಿ ನಡೆದ ಉದ್ಯೋಗ ಕಡಿತವು 2022ರ ಒಟ್ಟಾರೆ ಉದ್ಯೋಗ ಕಡಿತವನ್ನು ಮೀರಿಸಿದೆ.

ಲಭ್ಯವಿರೋ ಮಾಹಿತಿಯ ಪ್ರಕಾರ ಒಟ್ಟು 518 ಟೆಕ್ ಕಂಪನಿಗಳು ಈ ವರ್ಷದ ಜನವರಿ 1 ಮತ್ತು ಮಾರ್ಚ್ 23 ರ ನಡುವೆ 1,71,858 ಉದ್ಯೋಗಿಗಳನ್ನು ವಜಾಗೊಳಿಸಿವೆ. 2022ರಲ್ಲಿ ಒಟ್ಟಾರೆಯಾಗಿ ಬಿಡುಗಡೆಯಾದ ಉದ್ಯೋಗಿಗಳ ಸಂಖ್ಯೆ 1,61,411 ರಷ್ಟಿದೆ. ಜಾಗತಿಕ ಐಟಿ ಮೇಜರ್‌ಗಳಾದ ಗೂಗಲ್, ಮೈಕ್ರೋಸಾಫ್ಟ್, ಮೆಟಾ, ಅಮೆಜಾನ್ ಮತ್ತು ಆಕ್ಸೆಂಚರ್ ಕಂಪನಿಗಳು 2023ರ ಉದ್ಯೋಗ ಕಡಿತಕ್ಕೆ ಹೆಚ್ಚಿನ ಕೊಡುಗೆ ನೀಡಿವೆ.

layoffs.fyi ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ 2022 ರಲ್ಲಿಒಟ್ಟು 1,052 ಟೆಕ್ ಕಂಪನಿಗಳು 1,61,411 ಉದ್ಯೋಗಿಗಳನ್ನು ವಜಾಗೊಳಿಸಿವೆ.

layoffs.fyi ಯ ಇತ್ತೀಚಿನ ಮಾಹಿತಿಯ ಪ್ರಕಾರ, ಒಟ್ಟು 517 ಟೆಕ್ ಕಂಪನಿಗಳು 2023 ರಲ್ಲಿ ಮಾರ್ಚ್ 23 ರವರೆಗೆ ಜಾಗತಿಕವಾಗಿ 1,52,858 ಉದ್ಯೋಗಿಗಳನ್ನು ವಜಾಗೊಳಿಸಿವೆ. ಇದು Accenture ನ ಇತ್ತೀಚಿನ ವಜಾಗಳನ್ನು ಒಳಗೊಂಡಿಲ್ಲ. ಆಕ್ಸೆಂಚರ್‌ನಿಂದ 19,000 ಉದ್ಯೋಗಿಗಳ ಇತ್ತೀಚಿನ ವಜಾಗೊಳಿಸುವಿಕೆಗಳನ್ನು ಒಳಗೊಂಡರೆ ಒಟ್ಟು ವಜಾಗೊಂಡವರ ಸಂಖ್ಯೆ 1,71,858 ಗಳಷ್ಟಾಗುತ್ತದೆ. ಇದು 2022 ರ 1,61,411 ಸಂಖ್ಯೆಯನ್ನು ಮೀರಿಸುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!