ನ್ಯಾನ್ಸಿ ಪೆಲೋಸಿ ಭೇಟಿ ಬೆನ್ನಿಗೇ ತೈವಾನ್ ಜಲಸಂಧಿಯಲ್ಲಿ ಯುದ್ಧ ವಿಮಾನ ಸದ್ದು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಚ್ಚರಿಕೆಯ ನಡುವೆಯೂ ಅಮೆರಿಕ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈವಾನ್  ಭೇಟಿಗೆ ಗರಂ ಆಗಿರುವ ಚೀನಾ, ತಾನು ಉದ್ದೇಶಿತ ಮಿಲಿಟರಿ ಕ್ರಮಗಳನ್ನು ಪ್ರಾರಂಭಿಸುವುದಾಗಿ ಹೇಳಿದೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರು ಚೀನಾ ರಕ್ಷಣಾ ಸಚಿವಾಲಯದ ವಕ್ತಾರ ವು ಕಿಯಾನ್, ಚೀನಿ ಪೀಪಲ್ಸ್ ಲಿಬರೇಶನ್ ಆರ್ಮಿ ರಾಷ್ಟ್ರೀಯ ಸಾರ್ವಭೌಮತೆ,  ಪ್ರಾದೇಶಿಕ ಸಮಗ್ರತೆ ರಕ್ಷಿಸಲು ಹಾಗೂ ಬಾಹ್ಯ ಹಸ್ತಕ್ಷೇಪಗಳು, ಪ್ರತ್ಯೇಕತಾವಾದಿ ಪ್ರಯತ್ನ ತಡೆಯುವ ನಿಟ್ಟಿನಲ್ಲಿ  ಉದ್ದೇಶಿತ ಮಿಲಿಟರಿ ಕಾರ್ಯಾಚರಣಾ ಸರಣಿ ಪ್ರಾರಂಭಿಸುವುದಾಗಿ ಹೇಳಿದ್ದಾರೆ.

ನ್ಯಾನ್ಸಿ ಪೆಲೋಸಿ ಭೇಟಿಯ ಬೆನ್ನಿಗೇ ವಾಷಿಂಗ್ಟನ್ ಮತ್ತು ಬೀಜಿಂಗ್ ನಡುವೆ ಉದ್ವಿಗ್ನತೆ ಭುಗಿಲೆದ್ದಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಚೀನಾದ ಯುದ್ಧ ವಿಮಾನಗಳು ತೈವಾನ್ ಜಲಸಂಧಿಯನ್ನು ದಾಟಿವೆ ಎಂದು ಬೀಜಿಂಗ್ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಪ್ರತ್ಯಕ್ಷದರ್ಶಿಗಳೂ ಇದನ್ನು ಸ್ಪಷ್ಟಪಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!