ಹೊಸದಿಗಂತ ಡಿಜಿಟಲ್ ಡೆಸ್ಕ್
ನಂದಕುಮಾರ್ ತ್ರಿವೇದಿಯವರು 1921 ರಲ್ಲಿ ಮೇವಾರದ ಕನೋಡ್ ಪ್ರದೇಶದ ಬದ್ವಾಯಿ ಗ್ರಾಮದ ಪಂಡಿತ್ ಪರಮಾನಂದಜಿಯವರ ಮನೆಯಲ್ಲಿ ಜನಿಸಿದರು. ಅವರು ಸತ್ನಾದಲ್ಲಿ (ಮಧ್ಯಪ್ರದೇಶ) ಶಿಕ್ಷಣ ಪಡೆದರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಅವರು ಸಾತ್ನಾದಲ್ಲಿ ಹೋರಾಟಕ್ಕಿಳಿದರು. ಈ ವೇಳೆ ಪೊಲೀಸರು ಅವರನ್ನು ಸಾಕಷ್ಟು ಬಾರಿ ಥಳಿಸಿದರು. ಅವರು ತನ್ನ ಮಾತೃನೆಲ ಮೇವಾರಕ್ಕೆ ಬಂದ ನಂತರ, ಅವರು ತಮ್ಮ ಸಮಾಜವಾದಿ ಚಿಂತನೆಗಳ ಒಡನಾಡಿಗಳೊಂದಿಗೆ ಜವಾಬ್ದಾರಿಯುತ ಆಡಳಿತಕ್ಕಾಗಿ ಒತ್ತಾಯಿಸಿ ಹೋರಾಟ ಮಾಡಲು ಪ್ರಾರಂಭಿಸಿದರು. ಈ ಹೋರಾಟದ ವೇಳೆಯಲ್ಲೇ ಏಪ್ರಿಲ್ 4, 1946 ರಂದು ನಂದಕುಮಾರ್ ತ್ರಿವೇದಿ ಅವರ ಎರಡೂ ಕಾಲುಗಳಿಗೆ ಗುಂಡುಗಳು ತಗುಲಿದವು. ಇದರಿಂದ ಅವರ ಒಂದು ಕಾಲು ಊನವಾಯಿತು. ಅವರು ತಮ್ಮ ಜೀವಿತದ ಕೊನೆಯವಗೆ ದೇಶ ಸೇವೆಯಲ್ಲಿ ನಿರತರಾಗಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ