ಕಾಂಗ್ರೆಸಿನ ಸುಳ್ಳು ಆರೋಪಕ್ಕೆ ಜನಪ್ರೀಯ ಬಜೆಟ್ ಮಂಡಿಸುವ ಮೂಲಕ ಉತ್ತರಕೊಟ್ಟ ಮೋದಿ ಸರಕಾರ: ಸುಗುಣಾ‌

ಹೊಸದಿಗಂತ ವರದಿ, ಬಳ್ಳಾರಿ:

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ನಾಲ್ಕನೇ ಬಾರಿಗೆ ಜನಪ್ರೀಯ ಬಜೆಟ್ ಮಂಡಿಸಿ ದೇಶದ ಗಮನಸೆಳೆದಿದ್ದಾರೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಕೆ.ಸುಗುಣಾ‌ ಅವರು ಹೇಳಿದರು.
ನಗರದ ಭಾಜಪಾ ಜಿಲ್ಲಾ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಂಗ್ರೆಸ್ ನವರ ಸುಳ್ಳು ಆರೋಪಕ್ಕೆ ನಮ್ಮ ಕೇಂದ್ರದ ಮೋದಿಜೀ ‌ಅವರ‌ ನೇತೃತ್ವದ ಸರ್ಕಾರ ಜನಪ್ರೀಯ ಬಜೆಟ್ ಮಂಡಿಸುವ ಮೂಲಕ ಉತ್ತರ ನೀಡಿದೆ. ಕೇಂದ್ರದಲ್ಲಿ ಸುಮಾರು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ರೈತರ ಬಗ್ಗೆ ಕಿಂಚಿತ್ತೂ ಆಲೋಚಿಸಿಲ್ಲ, ಅವರು ಸಭೆ ಸಮಾರಂಭಗಳಿಗೆ ಮಾತ್ರ ಸೀಮಿತರಾಗಿದ್ದರು. ಅಟಲ್ ಜೀ, ಮೋದಿಜೀ ಅವರು ಪ್ರಧಾನಿಯಾದ ಬಳಿಕ ದೇಶಕ್ಕೆ ಅನ್ನ ನೀಡುವ ರೈತರಿಗೆ ಸಾಕಷ್ಟು ಕೊಡುಗೆಗಳನ್ನು ‌ನೀಡಿದ್ದಾರೆ, ಪ್ರತಿಯೋಬ್ಬ ರೈತರೂ ಆರ್ಥಿಕವಾಗಿ ಸದೃಢರಾಗಬೇಕು ಎಂದು ಮೋದಿಜೀ ಅವರು ಇಲ್ಲಿವರೆಗೆ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಎಲ್ಲ ವರ್ಗದವರ ಅಭಿವೃದ್ಧಿಗೆ ಪೂರಕವಾಗಿದೆ. ವಿಶೇಷವಾಗಿ ರೈತರಿಗೆ ಭೋನಸ್ ನೀಡಿದೆ. ಎಂಎಸ್ ಪಿ ಅಡಿ ರೈತರಿಗೆ ನೇರ ಹಣ ವರ್ಗಾವಣೆಗೆ 2.37 ಲಕ್ಷ ಕೋಟಿ ಮೀಸಲು, ಎಸ್ಸಿ ಎಸ್ಟಿ ವರ್ಗದ ರೈತರಿಗೆ ಆರ್ಥಿಕ ನೆರವು, ನೈಸರ್ಗಿಕ ಕೃಷಿಗೆ ಉತ್ತೇಜನ, ರಫ್ತು ಉತ್ತೇಜನಕ್ಕೆ ಕ್ರಮ,
2023 ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷವಾಗಿ ಆಚರಣೆ, ಉತ್ಪಾದನೆ, ಬಳಕೆ, ಉತ್ತೇಜನ, ಕಿಸಾನ್ ಡ್ರೋನ್, ಯೋಜನೆಯಡಿ ಕೃಷಿ‌ಭೂಮಿ ಸಮೀಕ್ಷೆ, ದಾಖಲೆಗಳ ಡಿಜಿಲೀಕರಣ ಹಾಗೂ ಕೃಷಿ ಆಧಾರಿತ ಸ್ಟಾರ್ಟಪ್ ಗಳ ನೆರವಿಗೆ ನಬಾರ್ಡ್ ಸಾಲ ಸೇರಿ ಅನೇಕ ‌ಕೊಡುಗೆಗಳನ್ನು ನೀಡಲಾಗಿದೆ ಎಂದರು.
ಭಾಜಪ ಜಿಲ್ಲಾಧ್ಯಕ್ಷ ಗೋನಾಳ್ ಮುರಹರಗೌಡ ಅವರು‌ ಮಾತನಾಡಿ, ಕೇಂದ್ರದ ಮೋದಿಜೀ ಅವರ‌ ನೇತೃತ್ವದ ಕೇಂದ್ರ ಸರ್ಕಾರ ಇಲ್ಲಿವರೆಗೂ ದೇಶದ ಅಭಿವೃದ್ಧಿಗೆ ಕೈಗೊಂಡ ಕ್ರಮಗಳನ್ನು ಇಡೀ ವಿಶ್ವವೇ ಕೊಂಡಾಡಿದೆ. ವಿತ್ತ ಸಚಿವೆ‌ ನಿರ್ಮಾಲಾ ಸೀತಾರಾಮನ್ ಅವರು ನಾಲ್ಕನೇ ಬಾರಿ ಜನಪ್ರೀಯ ಬಜೆಟ್ ಮಂಡಿಸಿ, ದಾಖಲೆ ಸೃಷ್ಟಿಸಿದ್ದಾರೆ. ನದಿ ಜೋಡಣೆಗೆ ಅಸ್ತು ಸೇರಿದಂತೆ ನಾನಾ ಮಹತ್ವದ ಯೋಜನೆಗಳನ್ನು ಪ್ರಕಟಿಸಿ ಇತರರಿಗೆ ಮಾದರಿಯಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ಮಾಜಿ ಸಂಸದೆ ಜೆ.ಶಾಂತಾ, ಮಹಿಳಾ‌ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಶಿವಕೃಷ್ಣ, ಶಾರದಾ ಹಿರೇಮಠ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನೀಲ್ ನಾಯ್ಡು, ಜಿಲ್ಲಾ ಉಪಾಧ್ಯಕ್ಷ ಗಾಲಿ ಶಂಕ್ರಪ್ಪ, ಮಹಿಳಾ ಮೋರ್ಚಾ ಪ್ರದಾನ ಕಾರ್ಯದರ್ಶಿ ಸುನಿತಾ, ಆನಂದೇಶ್ವರಿ ಸೇರಿದಂತೆ ಜಿಲ್ಲಾ ಸಮೀತಿ ಪದಾಧಿಕಾರಿಗಳು, ಕಾರ್ಯಕರ್ತರು, ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!