ಹೊಸದಿಗಂತ ಡಿಜಿಟಲ್ ಡೆಸ್ಕ್
ಟಾಲಿವುಡ್ ಹಿರಿಯ ನಟರಾದ ನರೇಶ್ ಮತ್ತು ಪವಿತ್ರಾ ಲೋಕೇಶ್ ನಡುವಿನ ಸಂಬಂಧ ಕೆಲ ತಿಂಗಳ ಹಿಂದೆ ದೊಡ್ಡ ಸದ್ದು ಮಾಡಿತ್ತು. ಅವರ ನಡುವಿನ ʼಸಂಬಂಧʼ ಮಾಧ್ಯಮಗಳಲ್ಲಿ ದೊಡ್ಡ ಹೆಡ್ ಲೈನ್ ಆಗಿತ್ತು. ಈಗ ಈ ಜೋಡಿ ಮತ್ತೊಮ್ಮೆ ಸುದ್ದಿಯಲ್ಲಿದೆ. ನರೇಶ್ ಮತ್ತು ಪವಿತ್ರಾ ಲೋಕೇಶ್ ಲವ್ ಸ್ಟೋರಿ ಸದ್ಯದಲ್ಲೇ ದೊಡ್ಡಪರದೆ ಮೇಲೆ ಕಾಣಿಸಿಕೊಳ್ಳಲಿದೆ.
ಈ ಜೋಡಿಯು ಇಲ್ಲಿಯವರೆಗೆ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಅಂದರು ಬಾಗುಂದಲಿ ಅಂಧುಲೋ ನೇನುಂಡಲಿ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇತ್ತೀಚಿನ ವರದಿಗಳನ್ನು ನಂಬುವುದಾದರೆ, ನರೇಶ್ ಮತ್ತು ಪವಿತ್ರಾ ತಮ್ಮ ವೈಯಕ್ತಿಕ ಜೀವನವನ್ನು ಆಧರಿಸಿ ಸಿನಿಮಾ ಮಾಡಲು ಯೋಜಿಸುತ್ತಿದ್ದಾರೆ.
ತಮ್ಮ ಜೀವನದಲ್ಲಿ ಇದುವರೆಗೆ ನಡೆದ ಸನ್ನಿವೇಶಗಳ ಮೇಲೆ ಚಲನಚಿತ್ರವನ್ನು ನಿರ್ಮಿಸುವ ಆಲೋಚನೆ ನರೇಶ್ ಅವರದ್ದು. ಅದು ಅವರ ಹಿಂದಿನ ಸಂಬಂಧಗಳು ಮತ್ತು ʼಪ್ರಸ್ತುತʼ ಬಾಂಧವ್ಯವನ್ನು ಒಳಗೊಂಡಿರುತ್ತದೆ. ಇನ್ನೊಂದು ವಿಶೇಷವೆಂದರೆ ಈ ಚಿತ್ರದಲ್ಲಿ ನರೇಶ್ ಮತ್ತು ಪವಿತ್ರಾ ಅವರೇ ತಮ್ಮ ಜೀವನದ ನಿಜ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇತ್ತೀಚೆಗಷ್ಟೇ ನರೇಶ್ ಅವರ ಮೂರನೇ ಪತ್ನಿ ರಮ್ಯಾ ನರೇಶ್ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ವಿಡಿಯೋ ಕ್ಲಿಪ್ ಅಂತರ್ಜಾಲದಲ್ಲಿ ವೈರಲ್ ಆಗಿತ್ತು. ವಿಡಿಯೋದಲ್ಲಿ ನರೇಶ್ ಅವರು ಪೊಲೀಸ್ ರಕ್ಷಣೆಯೊಂದಿಗೆ ಪವಿತ್ರಾ ಜೊತೆಗೆ ಅಪಾರ್ಟ್‌ಮೆಂಟ್‌ನಿಂದ ಹೊರಗೆ ಬರುತ್ತಿದ್ದು, ಅವರ ಪತ್ನಿ ರಮ್ಯಾ ಚಪ್ಪಲಿಯಿಂದ ಹೊಡೆದು ನಟನ ಮೇಲೆ ಹಲ್ಲೆ ನಡೆಸಿ ನಿಂದಿಸುತ್ತಿರುವುದು ಕಂಡುಬಂದಿತ್ತು. ಮತ್ತೊಂದೆಡೆ, ಪವಿತ್ರಾ ಅವರು ಸಹ ತನಗೆ ರಮ್ಯಾ ಕಿರುಕುಳ ನೀಡಿದ್ದರು ಎಂದು ಪೊಲೀಸ್ ದೂರು ದಾಖಲಿಸಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ