ʻನಾರಿ ಶಕ್ತಿ ವಂದನ್ ಅಧಿನಿಯಮʼ ಮಸೂದೆ ನವ ಪ್ರಜಾಪ್ರಭುತ್ವದ ಬದ್ಧತೆಯ ಪ್ರತೀಕ: ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ʻನಾರಿ ಶಕ್ತಿ ವಂದನ್ ಅಧಿನಿಯಮʼ ಒಂದು ಸಾಮಾನ್ಯ ಕಾನೂನಲ್ಲ ಬದಲಾಗಿ ನವ ಭಾರತದ ಪ್ರಜಾಸತ್ತಾತ್ಮಕ ಬದ್ಧತೆಯ ಪ್ರತೀಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ದೆಹಲಿಯ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪ್ರಧಾನ ಕಚೇರಿಯಲ್ಲಿ ನಾರಿ ಶಕ್ತಿ ವಂದನ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ʻನಾರಿ ಶಕ್ತಿ ವಂದನ್ ಅಧಿನಿಯಮ ಸಾಮಾನ್ಯ ಕಾನೂನಲ್ಲ, ಇದು ನವ ಭಾರತದ ಪ್ರಜಾಸತ್ತಾತ್ಮಕ ಬದ್ಧತೆಯ ಘೋಷಣೆಯಾಗಿದೆʼ ಎಂದರು. ಸಂಸತ್ತಿನ ಉಭಯ ಸದನಗಳಲ್ಲಿ ಅತ್ಯಧಿಕ ಬಹುಮತದೊಂದಿಗೆ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿದ ಐತಿಹಾಸಿಕ ಕ್ರಮಕ್ಕಾಗಿ ಪ್ರಧಾನಿ ದೇಶದ ಎಲ್ಲಾ ಮಹಿಳೆಯರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಇಂದು, ನಾನು ದೇಶದ ಎಲ್ಲಾ ಮಹಿಳೆಯರನ್ನು ಅಭಿನಂದಿಸುತ್ತೇನೆ. ನಿನ್ನೆ ಮತ್ತು ಹಿಂದಿನ ದಿನ, ನಾವು ಹೊಸ ಇತಿಹಾಸವನ್ನು ನಿರ್ಮಿಸಲು ಸಾಕ್ಷಿಯಾಗಿದ್ದೇವೆ. ಆ ಇತಿಹಾಸವನ್ನು ರಚಿಸಲು ಕೋಟಿಗಟ್ಟಲೆ ಜನರು ನಮಗೆ ಅವಕಾಶವನ್ನು ನೀಡಿದ್ದು ನಮ್ಮ ಅದೃಷ್ಟ.  ಕೆಲ ನಿರ್ಧಾರವು ದೇಶದ ಭವಿಷ್ಯವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಇಂದು ನಾವೆಲ್ಲರೂ ಅಂತಹ ಒಂದು ನಿರ್ಧಾರಕ್ಕೆ ಸಾಕ್ಷಿಯಾಗಿದ್ದೇವೆ ಎಂದರು.

ಕಳೆದ ಹಲವು ದಶಕಗಳಿಂದ ದೇಶ ಕಾಯುತ್ತಿದ್ದ ಕನಸು ಈಗ ನನಸಾಗಿದೆ. ‘ನಾರಿ ಶಕ್ತಿ ವಂದನ್ ಕಾಯ್ದೆ’ಯನ್ನು ಸಂಸತ್ತಿನ ಉಭಯ ಸದನಗಳು ದಾಖಲೆ ಮತಗಳೊಂದಿಗೆ ಅಂಗೀಕರಿಸಿವೆ. ಸಂಸತ್ತಿನಲ್ಲಿ ಮಸೂದೆಯನ್ನು ಬೆಂಬಲಿಸಿದ್ದಕ್ಕಾಗಿ ಪ್ರಧಾನಿಯವರು ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಸಂಸದರಿಗೆ ಧನ್ಯವಾದ ಅರ್ಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!