Wednesday, June 7, 2023

Latest Posts

ನರೋಡಾ ಗಾಮ್ ಹತ್ಯಾಕಾಂಡ ಪ್ರಕರಣ: ಎಲ್ಲಾ ಆರೋಪಿಗಳ ಬಿಡುಗಡೆಗೆ ಕೋರ್ಟ್​ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

2002ರ ಗುಜರಾತ್ ಗಲಭೆಯಲ್ಲಿ (2002 Gujarat Riots) 11 ಮುಸ್ಲಿಮರ ನರೋಡಾ ಗಾಮ್ ಹತ್ಯಾಕಾಂಡ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವು ಬಿಜೆಪಿಯ ಮಾಯಾ ಕೊಡ್ನಾನಿ ಸೇರಿ ಎಲ್ಲಾ ಆರೋಪಿಗಳನ್ನು ಇಂದು (ಏ.20) ಬಿಡುಗಡೆ ಮಾಡುವಂತೆ ಕೋರ್ಟ್​ ಆದೇಶ ನೀಡಿದೆ.

ಪ್ರಕರಣದಲ್ಲಿ ಖುಲಾಸೆಗೊಂಡಿರುವ ಗುಜರಾತ್​​ನ ಮಾಜಿ ಸಚಿವೆ ಮತ್ತು ಬಿಜೆಪಿ ನಾಯಕಿ ಮಾಯಾ ಕೊಡ್ನಾನಿ ಮತ್ತು ಬಜರಂಗದಳದ ಬಾಬು ಬಜರಂಗಿ ಸೇರಿದಂತೆ 68 ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಆದೇಶವನ್ನು ಕೋರ್ಟ್​ ಆದೇಶ ನೀಡಿದೆ.

ಅಹಮದಾಬಾದ್‌ನ ನರೋಡಾ ಗಾಮ್‌ನಲ್ಲಿ ನಾಯಕಿ ಮಾಯಾ ಕೊಡ್ನಾನಿ ಮತ್ತು ಬಜರಂಗದಳದ ಬಾಬು ಬಜರಂಗಿ ಸೇರಿದಂತೆ 68 ಜನ ಮುಸ್ಲಿಂ ಮನೆಗಳಿಗೆ ಬೆಂಕಿ ಹಚ್ಚಿ ಪರಿಣಾಮ 11 ಮಂದಿ ಮುಸ್ಲಿಮರು ಸಾವನ್ನಪ್ಪಿದ್ದು, ಇದು ಕೋಮು ಗಲಭೆ ಪ್ರಕರಣ ಎಂದು ಅಹಮದಾಬಾದ್‌ನ ವಿಶೇಷ ನ್ಯಾಯಾಲಯವು ತೀರ್ಪು ನೀಡಿದೆ.

ಗೃಹ ಸಚಿವ ಅಮಿತ್ ಶಾ ಅವರು 2017ರಲ್ಲಿ ಮಾಯಾ ಕೊಡ್ನಾನಿ ಅವರ ರಕ್ಷಣಾ ಸಾಕ್ಷಿಯಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. 2002ರಲ್ಲಿ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ನೇತೃತ್ವದ ಗುಜರಾತ್ ಸರ್ಕಾರದಲ್ಲಿ ಸಚಿವರಾಗಿದ್ದರು, ಗುಜರಾತ್‌ನ ಗೋದ್ರಾದಲ್ಲಿ ಎಕ್ಸ್‌ಪ್ರೆಸ್​​ಗೆ ಬೆಂಕಿ ಹಚ್ಚಿದ ನಂತರ ಈ ಗಲಭೆಗಳು ಭುಗಿಲೆದ್ದವು. ಇದೀಗ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!